Matthew 21:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ನಮ್ಮ ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಿರಿ; ಅವನು ಕೂಡಲೆ ಅವುಗಳನ್ನು ಬಿಟ್ಟು ಕೊಡುವನು” ಎಂದು ಹೇಳಿ ಕಳುಹಿಸಿದನು.
Kannada BSI Bible 2016
ಮತ್ತು ಯಾವನಾದರೂ ನಿಮಗೆ ಏನಾದರೂ ಹೇಳಿದರೆ ನೀವು ಅವನಿಗೆ--ಅವು ಕರ್ತನಿಗೆ ಬೇಕಾಗಿವೆ ಎಂದು ಹೇಳಿರಿ; ಆಗ ಅವನು ಅವುಗಳನ್ನು ಕೂಡಲೆ ಕಳುಹಿಸುವನು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ಇವು ಸ್ವಾವಿುಯವರಿಗೆ ಬೇಕಾಗಿವೆ ಅನ್ನಿರಿ; ಕೂಡಲೆ ಅವುಗಳನ್ನು ಬಿಟ್ಟುಕೊಡುವನು ಎಂದು ಹೇಳಿ ಕಳುಹಿಸಿದನು.
Kannada Bible (KNCL) BSI 2016
ಯಾವನಾದರೂ ನಿಮ್ಮನ್ನು ಏನಾದರೂ ಕೇಳಿದರೆ, ‘ಇವು ಪ್ರಭುವಿಗೆ ಬೇಕಾಗಿವೆ’ ಎನ್ನಿ. ಅವನು ತಕ್ಷಣ ಕಳುಹಿಸಿಕೊಡುವನು,” ಎಂದು ಹೇಳಿಕಳುಹಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾವನಾದರೂ ನಿಮಗೆ ಏನಾದರೂ ಕೇಳಿದರೆ, ನೀವು ಅವನಿಗೆ, ‘ಇವು ಕರ್ತದೇವರಿಗೆ ಅವಶ್ಯವಾಗಿವೆ’ ಎಂದು ಹೇಳಿರಿ. ಆಗ ಅವನು ಅವುಗಳನ್ನು ಕೂಡಲೇ ಕಳುಹಿಸುವನು,” ಎಂದು ಹೇಳಿದರು.