Matthew 26:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಾಳಿದ್ದು ಪಸ್ಕಹಬ್ಬವೆಂಬುದು ನಿಮಗೆ ತಿಳಿದಿದೆ. ಅಂದು ಮನುಷ್ಯಕುಮಾರನನ್ನು ಶಿಲುಬೆಗೇರಿಸಲು ವೈರಿಗಳಿಗೆ ಒಪ್ಪಿಸುವರು” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು” ಎಂದು ಹೇಳಿದನು.
Kannada BSI Bible 2016
ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ಬಲ್ಲಿರಿ; ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿಕೊಡೋಣವಾಗುವದು ಎಂದು ಹೇಳಿದನು.
Kannada Bible (KNCL) BSI 2016
“ನಿಮಗೆ ಗೊತ್ತಿರುವ ಹಾಗೆ ಪಾಸ್ಕಹಬ್ಬಕ್ಕೆ ಇನ್ನು ಎರಡು ದಿನಗಳಿವೆ. ಆಗ ನರಪುತ್ರನನ್ನು ಶಿಲುಬೆಗೇರಿಸಲು ಹಿಡಿದೊಪ್ಪಿಸುವರು,” ಎಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಇರುವುದೆಂದು ನೀವು ಬಲ್ಲಿರಿ. ಆಗ ಮನುಷ್ಯಪುತ್ರನಾದ ನನ್ನನ್ನು ಶಿಲುಬೆಗೆ ಹಾಕಲು ಹಿಡಿದುಕೊಡುವರು,” ಎಂದರು.