Matthew 5:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಮೋಶೆಯ ಧರ್ಮನಿಯಮವನ್ನಾಗಲಿ ಪ್ರವಾದಿಗಳ ಪ್ರವಾದನೆಗಳನ್ನಾಗಲಿ ನಿರರ್ಥಕಪಡಿಸುವುದಕ್ಕೆ ನಾನು ಬಂದೆನೆಂದು ನೆನಸಬೇಡಿರಿ; ನಿರರ್ಥಕಪಡಿಸಲು ಬಂದಿಲ್ಲ; ಬದಲಾಗಿ ನೆರವೇರಿಸುವುದಕ್ಕೆ ಬಂದಿದ್ದೇನೆ.
Kannada BSI Bible 2016
ನ್ಯಾಯಪ್ರಮಾಣವನ್ನಾಗಲೀ ಪ್ರವಾದನೆಗಳ ನ್ನಾಗಲೀ ಹಾಳುಮಾಡುವದಕ್ಕಾಗಿ ನಾನು ಬಂದೆ ನೆಂದು ನೆನಸಬೇಡಿರಿ, ಹಾಳುಮಾಡುವದಕ್ಕಾಗಿ ಅಲ್ಲ; ಆದರೆ ನೆರವೇರಿಸುವದಕ್ಕಾಗಿ ಬಂದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ತೆಗೆದುಹಾಕುವದಕ್ಕೆ ನಾನು ಬಂದೆನೆಂದು ನೆನಸಬೇಡಿರಿ. ತೆಗೆದುಹಾಕುವದಕ್ಕೆ ಬಂದಿಲ್ಲ; ನೆರವೇರಿಸುವದಕ್ಕೆ ಬಂದಿದ್ದೇನೆ.
Kannada Bible (KNCL) BSI 2016
“ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಮೋಶೆಯ ನಿಯಮವನ್ನಾಗಲಿ, ಪ್ರವಾದನೆಗಳನ್ನಾಗಲಿ ರದ್ದು ಮಾಡುವುದಕ್ಕೆ ನಾನು ಬಂದೆನೆಂದು ಭಾವಿಸಬೇಡಿರಿ; ನಾನು ಅವುಗಳನ್ನು ರದ್ದುಗೊಳಿಸಲು ಬರಲಿಲ್ಲ, ನೆರವೇರಿಸಲು ಬಂದಿದ್ದೇನೆ.