Matthew 5:35 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಭೂಮಿಯ ಮೇಲೂ ಆಣೆ ಇಡಬೇಡಿ. ಏಕೆಂದರೆ ಭೂಮಿಯು ದೇವರ ಪಾದಪೀಠ. ಜೆರುಸಲೇಮಿನ ಮೇಲೂ ಆಣೆ ಇಡಬೇಡಿ, ಏಕೆಂದರೆ ಅದು ಆ ಮಹಾರಾಜನ ಪಟ್ಟಣ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಭೂಮಿಯ ಮೇಲೆ ಆಣೆ ಇಡಬೇಡಿ ಅದು ಆತನ ಪಾದಪೀಠ. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿ; ಅದು ಆ ಮಹಾ ರಾಜನ ಪಟ್ಟಣವಾಗಿದೆ.
Kannada BSI Bible 2016
ಭೂಮಿಯ ಮೇಲೆಯೂ ಬೇಡ; ಯಾಕಂದರೆ ಅದು ಆತನ ಪಾದಪೀಠವು; ಯೆರೂಸಲೇಮಿನ ಮೇಲೆಯೂ ಬೇಡ; ಯಾಕಂದರೆ ಅದು ಆ ಮಹಾ ಅರಸನ ಪಟ್ಟಣವಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಭೂವಿುಯ ಮೇಲೆ ಆಣೆ ಇಡಬೇಡ; ಅದು ಆತನ ಪಾದಪೀಠವು. ಯೆರೂಸಲೇವಿುನ ಮೇಲೆ ಆಣೆ ಇಡಬೇಡ; ಅದು ಆ ದೊಡ್ಡ ಅರಸನ ಪಟ್ಟಣವಾಗಿದೆ.
Kannada Bible (KNCL) BSI 2016
ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಭೂಮಿಯ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ದೇವರ ಪಾದಪೀಠವು. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ಮಹಾರಾಜನ ಪಟ್ಟಣವಾಗಿದೆ.