Micah 1:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮಾರೊತ್‌ನಲ್ಲಿ ವಾಸಿಸುವ ಜನರು ಬಲಹೀನರಾಗಿದ್ದಾರೆ. ಅವರು ಶುಭವಾರ್ತೆಗಾಗಿ ಕಾಯುತ್ತಿದ್ದಾರೆ. ಯಾಕೆಂದರೆ ಜೆರುಸಲೇಮಿನ ನಗರ ದ್ವಾರದ ಬಳಿಗೆ ಯೆಹೋವನಿಂದ ಆಪತ್ತು ಬಂದಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೇಡು ಯೆಹೋವನಿಂದ ಹೊರಟು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ತಮಗೆ ಮೇಲುಂಟಾಗುವುದಿಲ್ಲವೋ ಎಂದು ವೇದನೆಪಡುತ್ತಾರೆ.
Kannada BSI Bible 2016
ಮಾರೋತಿನ ನಿವಾಸಿ ಒಳ್ಳೇದಕ್ಕೆ ಜಾಗ್ರತೆಯಾಗಿ ಕಾದುಕೊಳ್ಳುತ್ತಾನೆ; ಆದರೆ ಕೇಡು ಕರ್ತನಿಂದ ಯೆರೂಸಲೇಮಿನ ಬಾಗಲಿಗೆ ಇಳಿದಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೇಡು ಯೆಹೋವನಿಂದಿಳಿದು ಯೆರೂಸಲೇವಿುನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ಮೇಲುಂಟಾಗುವದಿಲ್ಲವೋ ಎಂದು ವೇದನೆಪಡುತ್ತಾರೆ.
Kannada Bible (KNCL) BSI 2016
ಮಾರೋತಿನ ನಿವಾಸಿಗಳು ತಮ್ಮ ಸಂಕಟ ಪರಿಹಾರವಾಗುವುದೋ ಇಲ್ಲವೋ ಎಂದು ವೇದನೆಪಡುತ್ತಾರೆ: ಏಕೆಂದರೆ ಸ್ವಾಮಿಯಿಂದ ಬಂದ ವಿಪತ್ತು ಜೆರುಸಲೇಮಿನ ಪುರದ್ವಾರವನ್ನು ಮುಟ್ಟಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೇಡು ಯೆಹೋವ ದೇವರಿಂದ ಇಳಿದು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ಮೇಲುಂಟಾಗುವುದಿಲ್ಲವೋ ಎಂದು ವೇದನೆ ಪಡುತ್ತಾರೆ.