Micah 1:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮಾರೇಷದಲ್ಲಿ ವಾಸಿಸುವ ಜನರೇ, ನಿಮಗೆ ವಿರುದ್ಧವಾಗಿ ನಾನು ಒಬ್ಬ ವ್ಯಕ್ತಿಯನ್ನು ಕರೆತರುವೆನು. ಅವನು ನಿಮ್ಮ ಬಳಿಯಲ್ಲಿರುವ ವಸ್ತುಗಳನ್ನು ಕಿತ್ತುಕೊಳ್ಳುವನು. ಇಸ್ರೇಲಿನ ಮಹಿಮೆಯು (ದೇವರ) ಅದುಲ್ಲಾಮಿಗೆ ಬರುವದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಾಯೇಲಿನ ನಾಯಕರು ಅದುಲ್ಲಾಮ್ ಪಟ್ಟಣಕ್ಕೆ ಸೇರುವುದು.
Kannada BSI Bible 2016
ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು.ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮಾರೇಷದವರೇ, ನಿಮ್ಮನ್ನು ವಶಮಾಡಿಕೊಳ್ಳತಕ್ಕವನನ್ನು ಇನ್ನು ನಿಮ್ಮ ಬಳಿಗೆ ಬರಮಾಡುವೆನು; ಇಸ್ರಾಯೇಲಿನ ಮಹಿಮೆಯವರು ಅದುಲ್ಲಾವಿುಗೆ ಸೇರುವರು.
Kannada Bible (KNCL) BSI 2016
ಮಾರೇಷದವರೇ, ಆಕ್ರಮಣಕಾರನೊಬ್ಬನನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಯೇಲಿನ ವೈಭವವು ಅದುಲ್ಲಾಮಿನ ಪಾಲಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಾರೇಷದ ನಿವಾಸಿಯೇ, ನಿನಗೆ ವಿರೋಧವಾಗಿ ಜಯಶಾಲಿಗಳನ್ನು ನಾನು ತರುವೆನು. ಇಸ್ರಾಯೇಲಿನ ಮಹಿಮೆಯಾದಾತನು ಅದುಲ್ಲಾಮಿನ ಮಟ್ಟಿಗೂ ಬರುವನು.