Micah 4:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ತಮ್ಮ ಯೋಜನೆಯನ್ನು ಹಾಕುತ್ತಾರೆ. ಆದರೆ ಯೆಹೋವನ ಯೋಜನೆಯೇನೆಂದು ಅವರು ಅರಿಯರು. ಯೆಹೋವನು ತನ್ನ ಜನರನ್ನು ಒಂದು ವಿಶೇಷ ಉದ್ದೇಶಕ್ಕಾಗಿ ಇಲ್ಲಿಗೆ ತಂದಿದ್ದಾನೆ. ಆ ಜನರು ಕಣಕ್ಕೆ ಹಾಕಿದ ಸಿವುಡುಗಳಂತೆ ನಜ್ಜುಗುಜ್ಜಾಗುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ, ಅವು ಯೆಹೋವನ ಆಲೋಚನೆಗಳನ್ನು ತಿಳಿದಿಲ್ಲ, ಆತನ ಸಂಕಲ್ಪವನ್ನು ಗ್ರಹಿಸಲಿಲ್ಲ, ಕಣಕ್ಕೆ ಹಾಕಿದ ಸಿವುಡುಗಳ ಹಾಗೆ ಅವುಗಳನ್ನು ಕೂಡಿಸಿದ್ದಾನಲ್ಲಾ.
Kannada BSI Bible 2016
ಆದರೆ ಕರ್ತನ ಯೋಚನೆಗಳು ಅವರಿಗೆ ತಿಳಿಯವು, ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ; ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವನು.ಚೀಯೋನಿನ ಕುಮಾರ್ತೆಯೇ; ಎದ್ದು ತುಳಿ. ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸೆಗಳನ್ನು ತಾಮ್ರವಾಗಿಯೂ ಮಾಡುವೆನು. ನೀನು ಅನೇಕ ಜನಗಳನ್ನು ಪುಡಿಪುಡಿಮಾಡುವಿ; ಮತ್ತು ಅವರ ಲಾಭವನ್ನು ಕರ್ತನಿಗೂ ಅವರ ಸಂಪತ್ತನ್ನು ಸಮಸ್ತ ಭೂಮಿಯ ಕರ್ತನಿಗೂ ಪ್ರತಿಷ್ಠೆ ಮಾಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ಅವು ಯೆಹೋವನ ಆಲೋಚನೆಗಳನ್ನು ತಿಳಿದಿಲ್ಲ, ಆತನ ಸಂಕಲ್ಪವನ್ನು ಗ್ರಹಿಸಿಲ್ಲ; ಕಣಕ್ಕೆ ಹಾಕಿದ ಸಿವುಡುಗಳ ಹಾಗೆ ಅವುಗಳನ್ನು ಕೂಡಿಸಿದ್ದಾನಲ್ಲಾ.
Kannada Bible (KNCL) BSI 2016
ಆದರೆ ಸರ್ವೇಶ್ವರಸ್ವಾಮಿಯ ಆಲೋಚನೆಗಳನ್ನು ಅವರು ಅರಿತುಕೊಂಡಿಲ್ಲ. ಆ ಸ್ವಾಮಿಯ ಉದ್ದೇಶವನ್ನು ಅವರು ಗ್ರಹಿಸಿಕೊಂಡಿಲ್ಲ; ಕಣಕ್ಕೆ ಹಾಕಿದ ಕಂತೆಗಳಂತೆ ಅವರನ್ನು ಸ್ವಾಮಿ ಸೇರಿಸಿದ್ದಾರೆ ಎಂಬುದನ್ನು ಅವರು ಅರ್ಥೈಸಿಕೊಂಡಿಲ್ಲ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೆಹೋವ ದೇವರ ಯೋಚನೆಗಳು ಅವರಿಗೆ ತಿಳಿದಿಲ್ಲ. ಆತನ ಆಲೋಚನೆಯನ್ನು ಅವರು ಗ್ರಹಿಸಲಿಲ್ಲ. ಏಕೆಂದರೆ ಕಣದಲ್ಲಿ ಸಿವುಡುಗಳ ಹಾಗೆ ಅವರನ್ನು ಕೂಡಿಸುವರು.