Micah 4:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಹಿಂಡುಗಳ ಗೋಪುರವೇ, ನಿನ್ನ ಸಮಯವು ಬರುವದು. ಚೀಯೋನಿನ ಒಫೆಲ್ ಗುಡ್ಡವೇ, ನಿನಗೆ ತಿರುಗಿ ಅಧಿಕಾರ ದೊರಕುವುದು. ಹೌದು, ಮೊದಲಿನಂತೆಯೇ ಜೆರುಸಲೇಮಿನಲ್ಲೇ ರಾಜ್ಯವಿರುವುದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕುರಿಮಂದೆಗೆ ರಕ್ಷಣೆ ಕೊಡುವ ಗೋಪುರವೇ, ಚೀಯೋನ್ ಯುವತಿಯ ಸುಭದ್ರ ಕೋಟೆಯೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವುದು. ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವುದು.
Kannada BSI Bible 2016
ಇದಲ್ಲದೆ ನೀನು ಮಂದೆಯ ಬುರುಜೇ ಚೀಯೋನಿನ ಕುಮಾರ್ತೆಯ ದುರ್ಗವೇ, ನಿನಗೆ ಬರು ವದು, ಹೌದು, ಮೊದಲನೇ ದೊರೆತನವೂ ಯೆರೂ ಸಲೇಮಿನ ಕುಮಾರ್ತೆಗೆ ರಾಜ್ಯವೂ ಬರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹಿಂಡಿಗೆ ರಕ್ಷಕವಾದ ಹೂಡೆಯೇ, ಚೀಯೋನ್ ಯುವತಿಯ ಗುಡ್ಡವೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವದು, ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವದು.
Kannada Bible (KNCL) BSI 2016
ಜೆರುಸಲೇಮೇ, ಮಂದೆಗೆ ರಕ್ಷೆಕೊಡುವ ಗೋಪುರವೇ, ಸಿಯೋನ್ ಕುವರಿಯ ಸುಭದ್ರಕೋಟೆಯೇ, ಹಿಂದಿನ ಆಡಳಿತ ನಿನಗೆ ಮರಳಿ ಲಭಿಸುವುದು. ಪ್ರಾಚೀನ ರಾಜ್ಯಾಧಿಕಾರ ಪುನಃ ನಿನಗೆ ದೊರಕುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕುರಿಮಂದೆಯ ಬುರುಜೇ, ಚೀಯೋನ್ ಪುತ್ರಿಯ ದುರ್ಗವೇ, ಮೊದಲಿದ್ದ ರಾಜ್ಯಾಧಿಕಾರವೂ ನಿಮಗೆ ಲಭಿಸುವುದು. ಯೆರೂಸಲೇಮಿನ ಪುತ್ರಿಗೆ ರಾಜ್ಯತ್ವವೂ ಬರುವುದು.”