Micah 5:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿನ್ನ ವಿಗ್ರಹಗಳನ್ನೂ ಕಲ್ಲುಕಂಬಗಳನ್ನೂ ಒಡೆದು ನಾಶಮಾಡುವೆನು. ನಿನ್ನ ಕೈಗಳು ಮಾಡಿದ ವಸ್ತುಗಳನ್ನು ನೀನು ಪೂಜಿಸುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನ್ನ ಮೂರ್ತಿಗಳನ್ನು, ಕಲ್ಲುಕಂಬಗಳನ್ನು ನಿನ್ನಲ್ಲಿ ನಿಲ್ಲದಂತೆ ಒಡೆದುಹಾಕುವೆನು. ನಿನ್ನ ಕೈರೂಪಿಸಿದ್ದನ್ನು ಇನ್ನು ಪೂಜಿಸದಂತೆ ಮಾಡುವೆ.
Kannada BSI Bible 2016
ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ನಿನ್ನ ಮಧ್ಯದೊಳಗಿಂದ ಕಡಿದು ಬಿಡುವೆನು; ನೀನು ಇನ್ನು ಸ್ವಂತ ಕೈಕೆಲಸಗಳನ್ನು ಆರಾಧಿಸುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಮೂರ್ತಿಗಳನ್ನೂ ಕಲ್ಲುಕಂಬಗಳನ್ನೂ ನಿನ್ನಲ್ಲಿ ನಿಲ್ಲದಂತೆ ಒಡೆದುಹಾಕುವೆನು, ನಿನ್ನ ಕೈ ರೂಪಿಸಿದ್ದನ್ನು ಇನ್ನು ಪೂಜಿಸದಿರುವಿ.
Kannada Bible (KNCL) BSI 2016
ನೀನು ಕೆತ್ತಿದ ವಿಗ್ರಹಗಳನ್ನು ಒಡೆದುಹಾಕಿ, ನೀನು ನಿಲ್ಲಿಸಿದ ಕಲ್ಲುಕಂಬಗಳನ್ನು ಉರುಳಿಸಿಬಿಡುವೆನು. ನಿನ್ನ ಕೈಗೆಲಸವಾದ ವಿಗ್ರಹಗಳನ್ನು ನೀನು ಪೂಜಿಸದಂತೆ ಮಾಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ಸಹ ನಿನ್ನ ಮಧ್ಯದೊಳಗಿಂದ ಕಡಿದುಬಿಡುವೆನು. ಇನ್ನು ನಿನ್ನ ಸ್ವಂತ ಕೈಗಳು ರೂಪಿಸಿದ್ದನ್ನು ನೀನು ಆರಾಧಿಸದಂತೆ ಮಾಡುವೆನು.