Micah 7:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿನ್ನ ಜನರು ದೇಶಕ್ಕೆ ಹಿಂತಿರುಗುವರು. ಅವರು ಅಶ್ಶೂರದಿಂದಲೂ ಈಜಿಪ್ಟ್ ನಗರಗಳಿಂದಲೂ ಹಿಂದೆ ಬರುವರು. ನಿನ್ನ ಜನರು ಈಜಿಪ್ಟಿನಿಂದಲೂ ಯೂಫ್ರೇಟೀಸ್ ನದಿಯ ಆಚೆಕಡೆಯಿಂದಲೂ ಬರುವರು. ಪಶ್ಟಿಮದ ಸಮುದ್ರದ ಕಡೆಯಿಂದ ಬರುವರು. ಪೂರ್ವದ ಪರ್ವತಗಳ ಕಡೆಯಿಂದ ಬರುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದೇ ದಿನದಲ್ಲಿ ನಿನ್ನ ಜನರು ಅಶ್ಶೂರದಿಂದಲೂ, ಐಗುಪ್ತದ ಪಟ್ಟಣಗಳಿಂದಲೂ ನಿನ್ನ ಬಳಿಗೆ ಕೂಡಿ ಬರುವರು. ಸಮುದ್ರದಿಂದ ಸಮುದ್ರದವರೆಗೆ, ಪರ್ವತದಿಂದ ಪರ್ವತದವರೆಗೆ ಅಂತು ಐಗುಪ್ತದಿಂದ ಯೂಫ್ರೆಟಿಸ್ ನದಿಯವರೆಗೂ ಚದುರಿರುವ ನಿನ್ನ ಸಕಲ ಜನರು ನಿನ್ನನ್ನು ಸೇರುವರು.
Kannada BSI Bible 2016
ಆ ದಿನದಲ್ಲಿ ಅಶ್ಶೂರಿನಿಂದಲೂ ಕೋಟೆಯುಳ್ಳ ಪಟ್ಟಣಗಳಿಂದಲೂ ಕೋಟೆಯಿಂದ ನದಿಯವರೆಗೂ ಸಮುದ್ರದಿಂದ ಸಮುದ್ರದ ವರೆಗೂ ಬೆಟ್ಟದಿಂದ ಬೆಟ್ಟದ ವರೆಗೂ ನಿನ್ನ ಬಳಿಗೆ ಬರುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದೇ ದಿನದಲ್ಲಿ ನಿನ್ನ ಜನರು ಅಶ್ಶೂರದಿಂದಲೂ ಐಗುಪ್ತದ ಪಟ್ಟಣಗಳಿಂದಲೂ ನಿನ್ನ ಬಳಿಗೆ ಕೂಡಿಬರುವರು; ಸಮುದ್ರದಿಂದ ಸಮುದ್ರದವರೆಗೆ, ಪರ್ವತದಿಂದ ಪರ್ವತದವರೆಗೆ, ಅಂತು ಐಗುಪ್ತದಿಂದ ಯೂಫ್ರೇಟೀಸ್ ನದಿಯವರೆಗೂ ಚದರಿರುವ ನಿನ್ನ ಸಕಲಜನರು ನಿನ್ನನ್ನು ಸೇರುವರು.
Kannada Bible (KNCL) BSI 2016
ಅಂದು ಜನರು ಅಸ್ಸೀರಿಯದಿಂದಲೂ ಈಜಿಪ್ಟಿನಿಂದಲೂ ನಿಮ್ಮ ಬಳಿಗೆ ಬಂದು ಸೇರುವರು. ಸಮುದ್ರದಿಂದ ಸಮುದ್ರದವರೆಗೂ ಪರ್ವತದಿಂದ ಪರ್ವತದವರೆಗೂ ಈಜಿಪ್ಟಿನಿಂದ ಯೂಫ್ರೆಟಿಸ್ ನದಿಯವರೆಗೂ ಚದರಿಹೋಗಿರುವ ಜನರೆಲ್ಲರು ನಿನ್ನೆಡೆಗೆ ಬರುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸದಲ್ಲಿ ಅಸ್ಸೀರಿಯರಿಂದಲೂ ಈಜಿಪ್ಟ್ ಪಟ್ಟಣಗಳಿಂದಲೂ ಯೂಫ್ರೇಟೀಸ್ ನದಿಯವರೆಗೂ ಸಮುದ್ರದಿಂದ ಸಮುದ್ರದವರೆಗೂ ಬೆಟ್ಟದಿಂದ ಬೆಟ್ಟದವರೆಗೂ ಜನರೆಲ್ಲರು ನಿನ್ನ ಬಳಿಗೆ ಬರುವರು.