Micah 7:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರಲ್ಲಿರುವ ಉತ್ತಮರೂ ಸಹ ಮುಳ್ಳಿನ ಪೊದೆಯಂತಿದ್ದಾರೆ. ಅವರಲ್ಲಿರುವ ಉತ್ತಮರೂ ಸಹ ಡೊಂಕುಡೊಂಕಾಗಿರುವ ಮುಳ್ಳುಪೊದೆಗಿಂತಲೂ ಡೊಂಕಾಗಿದ್ದಾರೆ. ನಿನ್ನ ಪ್ರವಾದಿಗಳು ಈ ದಿನವು ಬರುತ್ತಿದೆ ಎಂದು ಹೇಳುತ್ತಿದ್ದಾರೆ. ನಿನ್ನ ಪ್ರವಾದಿಗಳ ದಿವಸವು ಬಂದದೆ. ಈಗ ನೀನು ಶಿಕ್ಷಿಸಲ್ಪಡುವೆ. ನೀನು ಈಗ ಗಲಿಬಿಲಿಗೆ ಒಳಗಾಗುವೆ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರಲ್ಲಿ ಉತ್ತಮನೂ ಮುಳ್ಳಿನ ಪೊದೆಗೆ ಸಮಾನ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ. ನಿನ್ನ ಕಾವಲುಗಾರರು ಮುಂತಿಳಿಸಿದ ನಿನ್ನ ದಂಡನೆಯ ದಿನ ಬಂದಿದೆ. ಈಗ ನಿನ್ನ ಜನರಿಗೆ ಭ್ರಾಂತಿ ಹಿಡಿಯುವುದು.
Kannada BSI Bible 2016
ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ; ನಿನ್ನ ಕಾವಲುಗಾರರ ದಿವಸವೂ ನಿನ್ನ ವಿಚಾರಣೆಯೂ ಬರುತ್ತದೆ, ಈಗಲೇ ಅವರಿಗೆ ಗಾಬರಿಯಾಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರಲ್ಲಿ ಉತ್ತಮನೂ ಮುಳ್ಳುಕಂಪೆ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ; ನಿನ್ನ ಕಾವಲುಗಾರರು ಮುಂತಿಳಿಸಿದ ದಿನ, ನಿನ್ನ ದಂಡನೆಯ ದಿನ ಬಂದಿದೆ; ಈಗ ನಿನ್ನ ಜನರಿಗೆ ಭ್ರಾಂತಿಹಿಡಿಯುವದು.
Kannada Bible (KNCL) BSI 2016
ಅವರಲ್ಲಿ ಅತ್ಯುತ್ತಮನಾದವನೂ ಮುಳ್ಳಿನ ಪೊದೆಗೆ ಸಮಾನ. ಸತ್ಯವಂತನೂ ಮುಳ್ಳುಬೇಲಿಗಿಂತ ಕಡೆ. ಜನರ ದಂಡನೆಯ ದಿನ ಸಮೀಪಿಸಿದೆ. ಅವರ ಕಾವಲುಗಾರರಾದ ಪ್ರವಾದಿಗಳು ಮುಂತಿಳಿಸಿದ ಕಾಲ ಬಂದಿದೆ. ಜನರೆಲ್ಲರು ದಿಗ್ಭ್ರಾಂತರಾಗುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ. ದೇವರು ನಿನ್ನನ್ನು ಭೇಟಿಮಾಡುವ ದಿನ ಬಂದಿದೆ, ನಿನ್ನ ಕಾವಲುಗಾರರು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾರೆ. ಈಗ ನೀವು ಭಯಭೀತರಾಗುವ ಸಮಯ.