Nahum 2:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ವೈರಿಯು ನಿನ್ನ ಮೇಲೆ ಬರುವನು. ಆದ್ದರಿಂದ ನಿನ್ನ ಪಟ್ಟಣದ ಬುರುಜುಗಳನ್ನು ಕಾಯಿ. ಮಾರ್ಗದ ಮೇಲೆ ಕಣ್ಣಿಡು. ಯುದ್ಧಕ್ಕೆ ತಯಾರಾಗು. ರಣರಂಗಕ್ಕೆ ಹೋಗಲು ಸಿದ್ಧನಾಗು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನವೆಯೇ, ನಿನ್ನನ್ನು ಚದರಿಸುವವನು ನಿನಗೆ ಮುಖಾಮುಖಿಯಾಗಿ ಬಂದಿದ್ದಾನೆ; ಪೌಳಿಗೋಡೆಯನ್ನು ರಕ್ಷಿಸಲು ಸಿದ್ಧನಾಗು. ದಾರಿಯ ಮೇಲೆ ಕಣ್ಣಿಡು, ನಿನ್ನ ಸೊಂಟವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಚೆನ್ನಾಗಿ ದೃಢಮಾಡಿಕೋ.
Kannada BSI Bible 2016
ಚೂರುಚೂರಾಗಿ ಒಡೆದು ಬಿಡುವವನು ನಿನ್ನ ಎದುರಿಗೆ ಬಂದಿದ್ದಾನೆ; ಆಯುಧ ಗಳನ್ನು ಭದ್ರಪಡಿಸು; ದಾರಿಯನ್ನು ಕಾಯಿ; ನಡುವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿ ಮಾಡಿಕೋ.
Kannada BSI JV (ಕನ್ನಡ ಸತ್ಯವೇದವು J.V. (BSI))
[ನಿನೆವೆಯೇ,] ಚದರಿಸುವವನು ನಿನಗೆ ಮುಖಾಮುಖಿಯಾಗಿ ಬಂದಿದ್ದಾನೆ; ಪೌಳಿಗೋಡೆಯನ್ನು ಕಾಯಿ, ದಾರಿಯ ಮೇಲೆ ಕಣ್ಣಿಡು, ನಿನ್ನ ಸೊಂಟವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಚೆನ್ನಾಗಿ ದೃಢಮಾಡಿಕೋ.
Kannada Bible (KNCL) BSI 2016
ನಿನೆವೆಯೇ, ನಿನಗೆದುರಾಗಿ ನಿಂತಿಹನು, ನಿನ್ನನ್ನು ಚದುರಿಸುವವನು! ಕಾವಲಿಡು ಕೋಟೆಯ ಸುತ್ತಲು ಪಹರೆಯಿಡು ದಾರಿ ಕಾಯಲು; ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ ನಿಲ್ಲು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನೆವೆಯೇ, ಮುತ್ತಿಗೆ ಹಾಕುವವನು ನಿನಗೆ ವಿರೋಧವಾಗಿ ಹೊರಟಿದ್ದಾನೆ, ಕೋಟೆಯನ್ನು ಭದ್ರಪಡಿಸು; ದಾರಿಯನ್ನು ಕಾಯಿ; ನಡುವನ್ನು ಬಲಪಡಿಸಿಕೋ; ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿಮಾಡಿಕೋ.