Nahum 2:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ರಸ್ತೆಯ ಮೇಲೆ ರಥಗಳು ರಭಸದಿಂದ ಓಡುತ್ತಿವೆ. ನಗರದ ಚೌಕಕ್ಕೆ ಹಿಂದೆ ಮುಂದೆ ಓಡುತ್ತಿವೆ. ಅವು ಉರಿಯುವ ಪಂಜಿನೋಪಾದಿಯಲ್ಲಿವೆ, ಒಂದೆಡೆಯಿಂದ ಇನ್ನೊಂದೆಡೆಗೆ ಹಾರುವ ಮಿಂಚಿನಂತಿವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪಟ್ಟಣದ ಹೊರಗೆ ರಥಗಳು ರಭಸದಿಂದ ತಿರುಗಾಡುತ್ತವೆ, ಮೈದಾನಗಳಲ್ಲಿ ಧಡಧಡ ಓಡಾಡುತ್ತವೆ; ಪಂಜುಗಳಂತೆ ಬೆಳಗುತ್ತವೆ, ಮಿಂಚುಗಳ ಹಾಗೆ ಹಾರುತ್ತವೆ.
Kannada BSI Bible 2016
ರಥಗಳು ಬೀದಿಗಳಲ್ಲಿ ರಭಸವಾಗಿ ಓಡಾಡುವವು. ಹೆದ್ದಾರಿಗಳಲ್ಲಿ ಒಂದಕ್ಕೊಂದು ತಗಲು ವವು; ದೀವಟಿಗೆಗಳ ಹಾಗೆ ತೋರುವವು, ಮಿಂಚುಗಳ ಹಾಗೆ ಓಡುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪಟ್ಟಣದ ಹೊರಗೆ ರಥಗಳು ರಭಸದಿಂದ ತಿರುಗಾಡುತ್ತವೆ, ಮೈದಾನದಲ್ಲಿ ಧಡಧಡ ಓಡಾಡುತ್ತವೆ; ಪಂಜುಗಳಂತೆ ಬೆಳಗುತ್ತವೆ, ವಿುಂಚುಗಳ ಹಾಗೆ ಹಾರುತ್ತವೆ.
Kannada Bible (KNCL) BSI 2016
ಹಾದಿಬೀದಿಗಳಲಿ ಓಡಾಡುತ್ತಿವೆ ರಥಗಳು ರಭಸದಿಂದ ನಗರ ಚೌಕಗಳಲ್ಲಿ ಅವು ಅಡ್ಡಾಡುತ್ತವೆ ವೇಗದಿಂದ ಅವು ಬೆಳಗುತ್ತಿವೆ ಪಂಜುಗಳಂತೆ, ಹೊಳೆಯುತ್ತಿವೆ ಮಿಂಚಿನಂತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ರಥಗಳು ಬೀದಿಗಳಲ್ಲಿ ಬಿರುಗಾಳಿಯಂತೆ ಓಡಾಡುತ್ತವೆ, ಅವು ಚೌಕಗಳಲ್ಲಿ ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ನುಗ್ಗುತ್ತವೆ. ಅವು ಉರಿಯುವ ಪಂಜುಗಳಂತೆ ಕಾಣುತ್ತವೆ; ಅವರು ಮಿಂಚಿನಂತೆ ಸುತ್ತಾಡುತ್ತಾರೆ.