Nahum 2:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ವೈರಿಗಳು ತಮ್ಮ ಶೂರ ಯೋಧರನ್ನು ಕರೆಯುತ್ತಿದ್ದಾರೆ. ಅವರು ಮುನ್ನುಗ್ಗುವಾಗ ಎಡವಿಬೀಳುವರು, ಗೋಡೆಗಳ ಕಡೆಗೆ ನುಗ್ಗಿ ತಮ್ಮ ಗುರಾಣಿಗಳನ್ನು ಇಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪಟ್ಟಣದ ಅರಸನು ತನ್ನ ಸರದಾರರನ್ನು ಕರೆಕಳುಹಿಸಿದ್ದಾನೆ; ಅವರು ಓಡಿ ಹೋಗುತ್ತಾ ಮುಗ್ಗರಿಸುತ್ತಾರೆ; ಪೌಳಿಗೋಡೆ ಕಡೆಗೆ ತ್ವರೆಯಾಗಿ ಓಡುತ್ತಾರೆ; ಮರೆಯು ನಿಲ್ಲಿಸಲ್ಪಟ್ಟಿದೆ.
Kannada BSI Bible 2016
ಆತನು ತನಗೆ ಯೋಗ್ಯವಾದವ ರನ್ನು ಗಮನಿಸುವನು. ಅವರು ತಮ್ಮ ನಡೆಯಲ್ಲಿ ಎಡವುವರು; ಅದರ ಗೋಡೆಯ ಬಳಿಗೆ ತ್ವರೆಯಾಗಿ ಬರುವರು; ರಕ್ಷಣೆಯು ಸಿದ್ಧಮಾಡಲ್ಪಡುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
[ಪಟ್ಟಣದ] ಅರಸನು ತನ್ನ ಸರದಾರರನ್ನು ಸ್ಮರಿಸುತ್ತಾನೆ; ಹೋಗುತ್ತಾ ಮುಗ್ಗರಿಸುತ್ತಾರೆ; ಪೌಳಿಗೋಡೆಗೆ ಓಡುತ್ತಾರೆ; ಮರೆಯು ನಿಲ್ಲಿಸಲ್ಪಟ್ಟಿದೆ.
Kannada Bible (KNCL) BSI 2016
ಹಾಜರಾಗಲು ಕರೆಬಂದಿದೆ ಅರಸನಿಂದ ಸೇನಾಪತಿಗಳಿಗೆ; ಎದ್ದುಬಿದ್ದು ಓಡಾಡುತ್ತಿರೆ ಅವರು ಪೌಳಿಗೋಡೆ ಕಡೆಗೆ ಅಡ್ಡ ಗುರಾಣಿಗಳನ್ನೊಡ್ಡುತ್ತಿರೆ ಟಗರು ದಿಮ್ಮಿಗಳಿಗೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿನೆವೆಯು ತನ್ನ ಸೇನಾಪತಿಗಳನ್ನು ಕರೆಕಳುಹಿಸಿದ್ದಾನೆ. ಅವರು ತಮ್ಮ ನಡೆಯಲ್ಲಿ ಎಡವುವರು. ಅವರು ಸುಣ್ಣದ ಗೋಡೆಯ ಬಳಿಗೆ ತ್ವರೆಯಾಗಿ ಬರುವರು. ರಕ್ಷಣಾತ್ಮಕ ಗುರಾಣಿಯನ್ನು ಸಿದ್ಧ ಮಾಡಲಾಗಿದೆ.