Nahum 3:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನೆವೆಯೇ, ನಿನ್ನ ಜನರೆಲ್ಲಾ ಹೆಂಗಸರಂತೆ, ವೈರಿ ಸೈನಿಕರು ಅವರನ್ನು ಹಿಡಿದುಕೊಳ್ಳಲು ತಯಾರಾಗಿದ್ದಾರೆ. ನಿನ್ನ ದೇಶದ ದ್ವಾರಗಳು, ವೈರಿಗಳು ಪ್ರವೇಶಿಸುವಂತೆ ಅಗಲವಾಗಿ ತೆರೆಯಲ್ಪಟ್ಟಿವೆ. ದ್ವಾರದ ಬಾಗಿಲಿನ ಅಡ್ಡಪಟ್ಟಿಯು ಬೆಂಕಿಯಿಂದ ಸುಟ್ಟಿರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ! ನಿನ್ನಲ್ಲಿನ ಜನರು ಹೆಣ್ಣಿಗರು; ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ತೆರೆದು ಹಾಕಿವೆ; ಬೆಂಕಿಯು ನಿನ್ನ ಅಗುಳಿಗಳನ್ನು ನುಂಗಿಬಿಟ್ಟಿದೆ.
Kannada BSI Bible 2016
ಇಗೋ, ನಿನ್ನ ಮಧ್ಯದಲ್ಲಿರುವ ನಿನ್ನ ಜನರು ಹೆಂಗಸರ ಹಾಗಿದ್ದಾರೆ; ನಿನ್ನ ದೇಶದ ಬಾಗಲುಗಳು ನಿನ್ನ ಶತ್ರುಗಳಿಗೆ ಅಗಲವಾಗಿ ತೆರೆಯಲ್ಪಡುವವು; ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಡುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ನಿನ್ನಲ್ಲಿನ ಜನರು ಹೆಣ್ಣಿಗರು; ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ತೆರೆದು ಹಾಕಿವೆ; ಬೆಂಕಿಯು ನಿನ್ನ ಅಗುಳಿಗಳನ್ನು ನುಂಗಿಬಿಟ್ಟಿದೆ.
Kannada Bible (KNCL) BSI 2016
ನಿನ್ನ ಯೋಧರನ್ನು ನೋಡು; ಅವರೆಲ್ಲ ಹೆಣ್ಣಿಗರು. ನಿನ್ನ ದೇಶದ ದ್ವಾರಗಳು ಶತ್ರುಗಳಿಗೆ ತೆರೆದ ಬಾಗಿಲುಗಳು. ಅದರ ಕಬ್ಬಿಣದ ಅಗುಳಿಗಳು ಬೆಂಕಿಯಿಂದ ಭಸ್ಮವಾದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ನಿನ್ನ ಸೈನ್ಯಗಳನ್ನು ನೋಡು. ಅವರೆಲ್ಲರೂ ಮಹಿಳೆಯರೇ. ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ವಿಶಾಲವಾಗಿ ತೆರೆದಿವೆ. ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಟ್ಟಿದೆ.