Nahum 3:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀರನ್ನು ತಂದು ಪಟ್ಟಣದೊಳಗೆ ಶೇಖರಿಸಿಡು. ಯಾಕೆಂದರೆ ವೈರಿ ಸೈನ್ಯವು ನಿನ್ನ ನಗರವನ್ನು ಮುತ್ತುವವು. ನಗರದೊಳಗೆ ಅನ್ನ ನೀರನ್ನು ಯಾರಿಗೂ ತರಲು ಬಿಡುವುದಿಲ್ಲ. ನಿನ್ನ ಬುರುಜುಗಳನ್ನು ಬಲಪಡಿಸಿಕೊ. ಹೆಚ್ಚು ಇಟ್ಟಿಗೆಗಳನ್ನು ಮಾಡುವಂತೆ ಆವೆಮಣ್ಣನ್ನು ಶೇಖರಿಸು. ಗಾರೆಯನ್ನು ಕಲಸಿಕೊ. ಇಟ್ಟಿಗೆಗಳನ್ನು ಮಾಡುವ ಅಚ್ಚನ್ನು ತೆಗೆದುಕೊ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿಟ್ಟುಕೋ, ನಿನ್ನ ಕೋಟೆಗಳನ್ನು ಬಲಪಡಿಸಿಕೋ; ಮಣ್ಣಿಗೆ ಇಳಿ, ಜೇಡಿಮಣ್ಣನ್ನು ತುಳಿ, ಇಟ್ಟಿಗೆಯ ಅಚ್ಚನ್ನು ಹಿಡಿ.
Kannada BSI Bible 2016
ಮುತ್ತಿಗೆಗೋಸ್ಕರ ನೀರನ್ನು ಸೇದು ನಿನ್ನ ಬಲವಾದ ಕೋಟೆಗಳನ್ನು ಭದ್ರ ಮಾಡು; ಕೆಸರಿನಲ್ಲಿ ಸೇರು ಮಣ್ಣನ್ನು ತುಳಿ, ಇಟ್ಟಿಗೆ ಗೂಡನ್ನು ಬಲಪಡಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿಟ್ಟುಕೋ, ನಿನ್ನ ಬುರುಜುಗಳನ್ನು ಬಲಪಡಿಸಿಕೋ; ಮಣ್ಣಿಗೆ ಇಳಿ, ಜೇಡಿಯನ್ನು ತುಳಿ, ಇಟ್ಟಿಗೆಯ ಅಚ್ಚನ್ನು ಹಿಡಿ,
Kannada Bible (KNCL) BSI 2016
ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿ ಶೇಖರಿಸಿಡು. ನಿನ್ನ ಕೋಟೆಯನ್ನು ಭದ್ರಪಡಿಸು. ಮಣ್ಣಿಗೆ ಇಳಿ; ಜೇಡಿಯನ್ನು ತುಳಿ; ಇಟ್ಟಿಗೆಯ ಅಚ್ಚನ್ನು ಹಿಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮುತ್ತಿಗೆಗೋಸ್ಕರ ನೀರನ್ನು ಸೇದು; ನಿನ್ನ ಬಲವಾದ ಕೋಟೆಗಳನ್ನು ಭದ್ರಮಾಡು; ಕೆಸರಿನಲ್ಲಿ ಸೇರು; ಮಣ್ಣನ್ನು ತುಳಿ; ಇಟ್ಟಿಗೆ ಅಚ್ಚನ್ನು ಹಿಡಿ.