Nehemiah 10:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನಮ್ಮ ಗಂಡು ಮತ್ತು ಹೆಣ್ಣುಮಕ್ಕಳು ನಮ್ಮ ಸುತ್ತಲಿರುವ ಅನ್ಯರನ್ನು ಮದುವೆಯಾಗಲು ಬಿಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ದೇಶನಿವಾಸಿಗಳಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಿಲ್ಲ ಮತ್ತು ನಮ್ಮ ಗಂಡು ಮಕ್ಕಳಿಗೋಸ್ಕರ ಅವರಿಂದ ಹೆಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ.
Kannada BSI Bible 2016
ನಾವು ನಮ್ಮ ಕುಮಾರ್ತೆಯರನ್ನು ಆ ದೇಶದ ಜನರಿಗೆ ಕೊಡುವದಿಲ್ಲ. ನಮ್ಮ ಕುಮಾರರಿಗೆ ಅವರ ಕುಮಾರ್ತೆಯರನ್ನು ತಕ್ಕೊಳ್ಳುವದಿಲ್ಲ
Kannada BSI JV (ಕನ್ನಡ ಸತ್ಯವೇದವು J.V. (BSI))
ದೇಶನಿವಾಸಿಗಳಿಗೆ ನಮ್ಮ ಹೆಣ್ಣುಗಳನ್ನು ಕೊಡುವದಿಲ್ಲ. ನಮ್ಮ ಮಕ್ಕಳಿಗೋಸ್ಕರ ಅವರಿಂದ ಹೆಣ್ಣು ತೆಗೆದುಕೊಳ್ಳುವದಿಲ್ಲ;
Kannada Bible (KNCL) BSI 2016
‘ದೇಶನಿವಾಸಿಗಳಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಿಲ್ಲ; ನಮ್ಮ ಮಕ್ಕಳಿಗೆ ಅವರಿಂದ ಹೆಣ್ಣು ತೆಗೆದುಕೊಳ್ಳುವುದಿಲ್ಲ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾವು ನಮ್ಮ ಪುತ್ರಿಯರನ್ನು ಇತರ ಜನರಿಗೆ ಕೊಡುವುದಿಲ್ಲ, ನಮ್ಮ ಪುತ್ರರಿಗೆ ಅವರ ಪುತ್ರಿಯರನ್ನು ತೆಗೆದುಕೊಳ್ಳುವುದಿಲ್ಲ ಎಂದು ಆಣೆ ಮಾಡುತ್ತೇವೆ.