Nehemiah 10:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪ್ರತಿದಿನ ದೇವಾಲಯದೊಳಗೆ ಮೇಜಿನ ಮೇಲೆ ಇಡುವ ರೊಟ್ಟಿಗಳಿಗಾಗಿಯೂ ದಿನನಿತ್ಯದ ಸರ್ವಾಂಗಹೋಮಗಳಿಗೂ ಧಾನ್ಯಸರ್ಮರ್ಪಣೆಗೂ ಈ ಹಣವನ್ನು ಉಪಯೋಗಿಸಿರಿ. ಅಮವಾಸ್ಯೆ, ಸಬ್ಬತ್ ಮತ್ತು ಇತರ ವಿಶೇಷ ಸಭಾಕೂಟಗಳಲ್ಲಿ ಮಾಡುವ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ಇಸ್ರೇಲರನ್ನು ಶುದ್ಧರನ್ನಾಗಿ ಮಾಡುವ ಪವಿತ್ರ ಯಜ್ಞಗಳಿಗಾಗಿ ಮತ್ತು ಪಾಪಪರಿಹಾರಕ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ನಮ್ಮ ದೇವರ ಆಲಯದ ಯಾವ ಕಾರ್ಯಗಳಿಗೆ ಬೇಕಾದರೂ ಈ ಹಣವನ್ನು ಉಪಯೋಗಿಸಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಹಣವು ದೇವರ ಸನ್ನಿಧಿಯಲ್ಲಿ ಇಡತಕ್ಕ ರೊಟ್ಟಿ, ನಿತ್ಯಧಾನ್ಯ, ನೈವೇದ್ಯ ಇವುಗಳಿಗಾಗಿಯೂ, ನಿತ್ಯ ಸರ್ವಾಂಗಹೋಮ, ಸಬ್ಬತ್ ದಿನ, ಅಮಾವಾಸ್ಯೆ ಮತ್ತು ಜಾತ್ರೆ ಉತ್ಸವ ಇವುಗಳಲ್ಲಿ ಮಾಡಬೇಕಾಗಿರುವ ಸರ್ವಾಂಗಹೋಮ, ಸಮಾಧಾನಯಜ್ಞ, ಇಸ್ರಾಯೇಲರ ದೋಷಪರಿಹಾರಕ ಯಜ್ಞ ಇವುಗಳಿಗಾಗಿಯೂ ನಮ್ಮ ದೇವರ ದೇವಾಲಯಕ್ಕೆ ಸಂಬಂಧವಾದ ಬೇರೆ ಎಲ್ಲಾ ಕೆಲಸಕಾರ್ಯಗಳಿಗಾಗಿಯೂ ವೆಚ್ಚವಾಗಬೇಕು.
Kannada BSI Bible 2016
ಇಸ್ರಾಯೇಲ್ಯರ ಪ್ರಾಯ ಶ್ಚಿತ್ತವಾದ ಪಾಪಬಲಿಗೋಸ್ಕರವೂ ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ನಮ್ಮ ದೇವರ ಆಲಯದ ಸೇವೆಯ ನಿಮಿತ್ತವಾಗಿ ವರುಷಕ್ಕೆ ಶೆಕೆಲಿನಲ್ಲಿ ಮೂರರಲ್ಲಿ ಒಂದು ಪಾಲು ಕೊಡಲು ನಮಗೆ ನಾವು ನೇಮಕ ಮಾಡಿಕೊಂಡೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಹಣವು ದೇವರ ಸನ್ನಿಧಿಯಲ್ಲಿಡತಕ್ಕ ರೊಟ್ಟಿ, ನಿತ್ಯಧಾನ್ಯ ನೈವೇದ್ಯ ಇವುಗಳಿಗೋಸ್ಕರವೂ ನಿತ್ಯಸರ್ವಾಂಗಹೋಮ ಮತ್ತು ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಮಾಡತಕ್ಕ ಸರ್ವಾಂಗಹೋಮ, ಸಮಾಧಾನಯಜ್ಞ, ಇಸ್ರಾಯೇಲ್ಯರ ದೋಷಪರಿಹಾರಾರ್ಥವಾದ ಯಜ್ಞ ಇವುಗಳಿಗೋಸ್ಕರವೂ ನಮ್ಮ ದೇವಾಲಯ ಸಂಬಂಧವಾದ ಬೇರೆ ಎಲ್ಲಾ ಕೆಲಸಕ್ಕೋಸ್ಕರವೂ ವೆಚ್ಚವಾಗಬೇಕು;
Kannada Bible (KNCL) BSI 2016
ಈ ನಾಣ್ಯ, ದೇವರ ಸನ್ನಿಧಿಯಲ್ಲಿಡತಕ್ಕ ರೊಟ್ಟಿ, ನಿತ್ಯ ಧಾನ್ಯ, ನೈವೇದ್ಯ ಇವುಗಳಿಗಾಗಿ; ಹಾಗು ನಿತ್ಯ ದಹನಬಲಿ ಮತ್ತು ಸಬ್ಬತ್‍ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಮಾಡತಕ್ಕ ದಹನಬಲಿ, ಶಾಂತಿಸಮಾಧಾನ ಬಲಿ, ಇಸ್ರಯೇಲರ ದೋಷಪರಿಹಾರಾರ್ಥವಾದ ಬಲಿ, ಇವುಗಳಿಗಾಗಿ ಹಾಗು ನಮ್ಮ ದೇವಾಲಯ ಸಂಬಂಧವಾದ ಬೇರೆ ಎಲ್ಲ ಕೆಲಸಕಾರ್ಯಗಳಿಗಾಗಿ ವೆಚ್ಚವಾಗಬೇಕು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಹಣವನ್ನು, ಸಮ್ಮುಖದ ರೊಟ್ಟಿಗೋಸ್ಕರವೂ, ನಿತ್ಯಧಾನ್ಯ ಕಾಣಿಕೆಗೋಸ್ಕರವೂ, ವಿಶ್ರಾಂತಿಯ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಅರ್ಪಿಸುವ ನಿತ್ಯ ದಹನಬಲಿಗಳಿಗೋಸ್ಕರವೂ, ನೇಮಿಸಿದ ಹಬ್ಬಗಳಿಗೋಸ್ಕರವೂ, ಇಸ್ರಾಯೇಲರ ಪ್ರಾಯಶ್ಚಿತ್ತವಾದ ದೋಷಪರಿಹಾರದ ಬಲಿಗೋಸ್ಕರವೂ, ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ಉಪಯೋಗಿಸಬೇಕು.