Nehemiah 10:36 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ನಾವು ನಮ್ಮ ಚೊಚ್ಚಲು ಮಕ್ಕಳನ್ನು, ಚೊಚ್ಚಲು ದನ, ಕುರಿ, ಆಡುಗಳನ್ನು ದೇವಾಲಯದಲ್ಲಿ ಸೇವೆಮಾಡುತ್ತಿರುವ ಯಾಜಕರಿಗೆ ಒಪ್ಪಿಸುವೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮ್ಮ ಚೊಚ್ಚಲಮಕ್ಕಳ ವಿಷಯದಲ್ಲೂ, ನಮ್ಮ ಪಶುಗಳ ಹಿಂಡುಗಳಲ್ಲಿ ಚೊಚ್ಚಲಮರಿಗಳ ವಿಷಯದಲ್ಲೂ ಧರ್ಮಶಾಸ್ತ್ರವಿಧಿಗಳಿಗೆ ಅನುಸಾರವಾಗಿ ನಡೆದುಕೊಳ್ಳುವೆವು. ನಮ್ಮ ಚೊಚ್ಚಲ ಕರುಗಳನ್ನೂ, ಚೊಚ್ಚಲ ಆಡು, ಕುರಿಮರಿಗಳನ್ನೂ ನಮ್ಮ ದೇವಾಲಯಕ್ಕೆ ತಂದು ಅಲ್ಲಿ ಕೆಲಸ ನಡೆಸುತ್ತಿರುವ ಯಾಜಕರಿಗೆ ಕೊಡುವೆವು.
Kannada BSI Bible 2016
ನ್ಯಾಯಪ್ರಮಾಣದಲ್ಲಿ ಬರೆದಿರುವ ಹಾಗೆ ನಮ್ಮ ಕುಮಾರರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದ ವುಗಳನ್ನು ದನಗಳಲ್ಲಿಯೂ ಮಂದೆಗಳಲ್ಲಿಯೂ ಚೊಚ್ಚ ಲಾದವುಗಳನ್ನು ದೇವರ ಆಲಯಕ್ಕೆ ಸೇವಿಸುವ ಯಾಜ ಕರ ಬಳಿಗೆ ತರುವೆವು;
Kannada BSI JV (ಕನ್ನಡ ಸತ್ಯವೇದವು J.V. (BSI))
ನಮ್ಮ ಚೊಚ್ಚಲಮಕ್ಕಳ ವಿಷಯದಲ್ಲೂ ನಮ್ಮ ಪಶುಗಳ ಚೊಚ್ಚಲಮರಿಗಳ ವಿಷಯದಲ್ಲೂ ಧರ್ಮಶಾಸ್ತ್ರ ವಿಧಿಗನುಸಾರವಾಗಿ ನಡೆಯುವೆವು; ನಮ್ಮ ಚೊಚ್ಚಲ ಕರುಗಳನ್ನೂ ಚೊಚ್ಚಲ ಆಡುಕುರಿಮರಿಗಳನ್ನೂ ನಮ್ಮ ದೇವಾಲಯಕ್ಕೆ ತಂದು ಅಲ್ಲಿ ಕೆಲಸ ನಡಿಸುತ್ತಿರುವ ಯಾಜಕರಿಗೆ ಕೊಡುವೆವು;
Kannada Bible (KNCL) BSI 2016
ನಮ್ಮ ಚೊಚ್ಚಲಮಕ್ಕಳ ವಿಷಯದಲ್ಲೂ ನಮ್ಮ ಪ್ರಾಣಿಪಶುಗಳ ಚೊಚ್ಚಲಮರಿಗಳ ವಿಷಯದಲ್ಲೂ ಧರ್ಮಶಾಸ್ತ್ರ ವಿಧಿಗನುಸಾರವಾಗಿ ನಡೆಯುತ್ತೇವೆ; ನಮ್ಮ ಚೊಚ್ಚಲ ಕರುಗಳನ್ನೂ ಚೊಚ್ಚಲ ಆಡುಕುರಿಗಳನ್ನೂ ನಮ್ಮ ದೇವಾಲಯಕ್ಕೆ ತಂದು ಅಲ್ಲಿ ಸೇವೆಯಲ್ಲಿ ಇರುವ ಯಾಜಕರಿಗೆ ಕೊಡುತ್ತೇವೆ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಯ ನಿಯಮದಲ್ಲಿ ಬರೆದಿರುವ ಹಾಗೆ ನಮ್ಮ ಪುತ್ರರಲ್ಲಿಯೂ, ನಮ್ಮ ಪಶುಗಳಲ್ಲಿಯೂ ಚೊಚ್ಚಲಾದವುಗಳನ್ನು; ನಮ್ಮ ದನಗಳಲ್ಲಿಯೂ, ಮಂದೆಗಳಲ್ಲಿಯೂ ಚೊಚ್ಚಲಾದವುಗಳನ್ನು, ನಮ್ಮ ದೇವರ ಆಲಯಕ್ಕೆ ತಂದು, ನಮ್ಮ ದೇವರ ಆಲಯದಲ್ಲಿ ಸೇವಿಸುವ ಯಾಜಕರಿಗೆ ಕೊಡುತ್ತೇವೆ;