Nehemiah 12:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣದ ಕೋಣಿಗಳನ್ನು ಕಾಯುತ್ತಿದ್ದವರು ಯಾರೆಂದರೆ: ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್ ಮತ್ತು ಅಕ್ಕೂಬ್.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು. ದೇವರ ಮನುಷ್ಯನಾದ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರದಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ, ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.
Kannada BSI Bible 2016
ಮತ್ತನ್ಯನೂ ಬಕ್ಬುಕ್ಯನೂ ಒಬದ್ಯನೂ ಮೆಷುಲ್ಲಾಮನೂ ಟಲ್ಮೋ ನನೂ ಅಕ್ಕೂಬನೂ ಬೊಕ್ಕಸಗಳ ಬಾಗಲುಗಳನ್ನು ಕಾಯುವವರಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರ ಕಾಲದಲ್ಲಿದ್ದವರು - ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು. (ದೇವರ ಮನುಷ್ಯನಾದ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರತಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.)
Kannada Bible (KNCL) BSI 2016
ಇವರ ಕಾಲದಲ್ಲಿದ್ದವರು - ಹಷಬ್ಯ, ಶೇರೇಬ್ಯ, ಯೇಷೂವ, ಬಿನ್ನೂಯ್, ಕದ್ಮೀಯೇಲ್ ಇವರು.ದೈವಪುರುಷ ದಾವೀದನ ಅಪ್ಪಣೆಯ ಮೇರೆಗೆ ಇವರೂ ಇವರ ಸಹೋದರರೂ ಸರದಿಗೆ ಎರಡೆರಡು ವರ್ಗಗಳಾಗಿ ಪರಸ್ಪರ ಹಾಡುತ್ತಾ ಕೀರ್ತನೆಯನ್ನೂ ಕೃತಜ್ಞತಾಸ್ತುತಿಯನ್ನೂ ಮಾಡುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮತ್ತನ್ಯನೂ, ಬಕ್ಬುಕ್ಯನೂ, ಓಬದ್ಯನೂ, ಮೆಷುಲ್ಲಾಮನೂ, ಟಲ್ಮೋನನೂ, ಅಕ್ಕೂಬನೂ ಬೊಕ್ಕಸಗಳ ಬಾಗಿಲುಗಳನ್ನು ಕಾಯುವವರಾಗಿದ್ದರು.