Nehemiah 12:26 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈ ದ್ವಾರಪಾಲಕರು ಯೋಯಾಕೀಮನ ಕಾಲದಲ್ಲಿ ಸೇವೆ ಮಾಡಿದರು. ಯೋಯಾಕೀಮನು ಯೇಷೂವನ ಮಗ. ಯೇಷೂವನು ಯೋಚಾದಾಕನ ಮಗ. ನೆಹೆಮೀಯನು ರಾಜ್ಯಪಾಲನಾಗಿದ್ದ ದಿನಗಳಲ್ಲಿ ಮತ್ತು ಎಜ್ರನು ಯಾಜಕನೂ ಉಪದೇಶಕನೂ ಆಗಿದ್ದ ದಿನಗಳಲ್ಲಿ ಸಹ ಈ ದ್ವಾರಪಾಲಕರು ಸೇವೆ ಸಲ್ಲಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರಲ್ಲದೆ ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣಗಳನ್ನು ಕಾಯತ್ತಿದ್ದ ದ್ವಾರಪಾಲಕರು: ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್, ಅಕ್ಕೂಬ್ ಎಂಬುವವರು.
Kannada BSI Bible 2016
ಯೋಚಾದಾಕನ ಮಗ ನಾದ ಯೇಷೂವನ ಮಗನಾದ ಯೋಯಾಕೀಮನ ದಿವಸಗಳಲ್ಲಿಯೂ ಅಧಿಪತಿಯಾದ ನೆಹೆವಿಾಯನ ದಿವಸಗಳಲ್ಲಿಯೂ ಶಾಸ್ತ್ರಿಯೂ ಯಾಜಕನೂ ಆದ ಎಜ್ರನ ದಿವಸಗಳಲ್ಲಿಯೂ ಇವರು ಇದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರಲ್ಲದೆ ಬಾಗಲುಗಳ ಬಳಿಯಲ್ಲಿದ್ದ ಉಗ್ರಾಣಗಳನ್ನು ಕಾಯತಕ್ಕ ದ್ವಾರಪಾಲಕರಾದ ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್, ಅಕ್ಕೂಬ್ ಎಂಬವರು.
Kannada Bible (KNCL) BSI 2016
ಇವರಲ್ಲದೆ ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣಗಳನ್ನು ಕಾಯತಕ್ಕ ದ್ವಾರಪಾಲಕರಾದ ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್, ಅಕ್ಕೂಬ್ ಎಂಬವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೋಚಾದಾಕನ ಮಗ ಯೇಷೂವನ ಮಗ ಯೋಯಾಕೀಮನ ದಿವಸಗಳಲ್ಲಿಯೂ; ರಾಜ್ಯಪಾಲನಾದ ನೆಹೆಮೀಯನ ದಿವಸಗಳಲ್ಲಿಯೂ; ನಿಯಮಶಾಸ್ತ್ರಿಯೂ, ಯಾಜಕನೂ ಆದ ಎಜ್ರನ ದಿವಸಗಳಲ್ಲಿಯೂ ಇವರು ಇದ್ದರು.