Nehemiah 12:47 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜೆರುಬ್ಬಾಬೆಲ್ ಮತ್ತು ನೆಹೆಮೀಯನ ಕಾಲದಲ್ಲಿ ಇಸ್ರೇಲರೆಲ್ಲರೂ ಗಾಯಕರಿಗೆ ಮತ್ತು ದ್ವಾರಪಾಲಕರಿಗೆ ಅನುದಿನ ಅಗತ್ಯವಾದವುಗಳನ್ನು ಒದಗಿಸಿಕೊಟ್ಟರು. ಇತರ ಲೇವಿಯರಿಗೋಸ್ಕರವಾಗಿಯೂ ಜನರು ಹಣವನ್ನು ಪ್ರತ್ಯೇಕವಾಗಿಟ್ಟರು. ಲೇವಿಯರೂ ಸಹ ಆರೋನನ ವಂಶದ ಯಾಜಕರಿಗಾಗಿ ಹಣವನ್ನು ಪ್ರತ್ಯೇಕವಾಗಿಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜೆರುಬ್ಬಾಬೆಲ್ ಮತ್ತು ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಾಯೇಲರು ಗಾಯಕರಿಗೂ ದ್ವಾರಪಾಲಕರಿಗೂ ಪ್ರತಿದಿನ ಜೀವನಾಂಶವನ್ನು ಕೊಡುತ್ತಿದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಮತ್ತು ಲೇವಿಯರು ತಮ್ಮದರಲ್ಲಿಯ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು.
Kannada BSI Bible 2016
ಆದದರಿಂದ ಜೆರುಬ್ಬಾಬೆಲನ ದಿವಸಗಳ ಲ್ಲಿಯೂ ನೆಹೆವಿಾಯನ ದಿವಸಗಳಲ್ಲಿಯೂ ಇಸ್ರಾಯೇ ಲ್ಯರೆಲ್ಲರೂ ಹಾಡುಗಾರರಿಗೂ ದ್ವಾರಪಾಲಕರಿಗೂ ದಿನ ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಲೇವಿಯರಿಗೋಸ್ಕರ ಪರಿಶುದ್ಧ ಮಾಡಿದರು; ಲೇವಿಯರು ಹಾಗೆಯೇ ಆರೋನನ ಮಕ್ಕಳಿಗೆ ಪರಿಶುದ್ಧ ಮಾಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಜೆರುಬ್ಬಾಬೆಲ್, ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಾಯೇಲ್ಯರು ಗಾಯಕರಿಗೂ ದ್ವಾರಪಾಲಕರಿಗೂ ದಿನದಿನಕ್ಕೆ ಸಿಕ್ಕತಕ್ಕ ಭಾಗಗಳನ್ನು ಕೊಡುತ್ತಿದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಲೇವಿಯರು ತಮ್ಮದರಲ್ಲಿ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು.
Kannada Bible (KNCL) BSI 2016
ಜೆರುಬ್ಬಾಬೆಲ್, ನೆಹೆಮೀಯ ಇವರ ಕಾಲಗಳಲ್ಲಿ ಎಲ್ಲಾ ಇಸ್ರಯೇಲರು ಗಾಯಕರಿಗೂ ದ್ವಾರಪಾಲಕರಿಗೂ ದಿನದಿನಕ್ಕೆ ಸಿಕ್ಕತಕ್ಕ ಪಾಲುಗಳನ್ನು ಕೊಡುತ್ತ ಇದ್ದರು. ಇವರು ಅವುಗಳಲ್ಲಿ ದಶಮಾಂಶವನ್ನು ಲೇವಿಯರಿಗೂ ಲೇವಿಯರು ತಮ್ಮದರಲ್ಲಿ ದಶಮಾಂಶವನ್ನು ಆರೋನನ ಮಕ್ಕಳಿಗೂ ಕೊಡುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಜೆರುಬ್ಬಾಬೆಲನ ದಿವಸಗಳಲ್ಲಿಯೂ, ನೆಹೆಮೀಯನ ದಿವಸಗಳಲ್ಲಿಯೂ ಇಸ್ರಾಯೇಲರೆಲ್ಲರು ಹಾಡುಗಾರರಿಗೂ, ದ್ವಾರಪಾಲಕರಿಗೂ, ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಇತರ ಲೇವಿಯರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು ಮತ್ತು ಲೇವಿಯರು ಆರೋನನ ವಂಶಸ್ಥರಿಗೆ ಭಾಗವನ್ನು ಪ್ರತ್ಯೇಕವಾಗಿಟ್ಟರು.