Nehemiah 13:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ನಾನು ಅಧಿಕಾರಿಗಳಿಗೆ, “ನೀವು ದೇವರ ಆಲಯವನ್ನು ನಿರ್ಲಕ್ಷಿಸಿದ್ದೇನು?” ಎಂದು ಪ್ರಶ್ನಿಸಿದೆನು. ಅನಂತರ ನಾನು ಲೇವಿಯರನ್ನು ಒಟ್ಟಾಗಿ ಸೇರಿಸಿ ತಮ್ಮತಮ್ಮ ಸ್ಥಳಗಳಿಗೆ ಹೋಗಿ ತಮಗೆ ನೇಮಕವಾದ ಕರ್ತವ್ಯ ಪಾಲಿಸುವಂತೆ ಹೇಳಿದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದರ ದೆಸೆಯಿಂದ ನಾನು ಅಧಿಕಾರಿಗಳನ್ನು ಗದರಿಸಿ, “ದೇವಾಲಯವನ್ನು ಅಲಕ್ಷ್ಯ ಮಾಡಿದ್ದೇಕೆ?” ಎಂದು ಕೇಳಿದ್ದಲ್ಲದೆ ಬಿಟ್ಟು ಹೋದವರನ್ನು ಪುನಃ ಕರೆಯಿಸಿ ಅವರನ್ನು ಅವರವರ ಉದ್ಯೋಗಗಳಲ್ಲಿ ಇರಿಸಿದೆನು.
Kannada BSI Bible 2016
ಆಗ ನಾನು ಅಧಿಕಾರಸ್ತರನ್ನು ಗದರಿಸಿ ಅವರಿಗೆ--ದೇವರ ಮಂದಿರ ವನ್ನು ಬಿಟ್ಟದ್ದೇನಂದು ವಾದಿಸಿದೆನು. ಅವರನ್ನು ಕರಿಸಿ ಅವರನ್ನು ಅವರ ಸ್ಥಳಗಳಲ್ಲಿ ಇರಿಸಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದರ ದೆಸೆಯಿಂದ ನಾನು ಅಧಿಕಾರಿಗಳೊಡನೆ - ದೇವಾಲಯವನ್ನು ಅಲಕ್ಷ್ಯಮಾಡಿದ್ದೇಕೆ ಎಂಬದಾಗಿ ವಾದಿಸಿ ಬಿಟ್ಟುಹೋದವರನ್ನು ತಿರಿಗಿ ಕರಿಸಿ ಅವರನ್ನು ಅವರವರ ಉದ್ಯೋಗಗಳಲ್ಲಿರಿಸಿದೆನು.
Kannada Bible (KNCL) BSI 2016
ಈ ಕಾರಣ ನಾನು ಅಧಿಕಾರಿಗಳನ್ನು, “ದೇವಾಲಯವನ್ನು ಅಲಕ್ಷ್ಯಮಾಡಿದ್ದೇಕೆ?\, ಎಂಬುದಾಗಿ ಪ್ರಶ್ನಿಸಿದೆ; ಬಿಟ್ಟುಹೋದವರನ್ನು ತಿರುಗಿ ಕರೆಸಿ, ಅವರನ್ನು ಅವರವರ ಉದ್ಯೋಗಗಳಲ್ಲಿರಿಸಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಾನು ಅಧಿಕಾರಿಗಳನ್ನು ಗದರಿಸಿ ಅವರಿಗೆ, “ದೇವರ ಮಂದಿರವನ್ನು ಅಲಕ್ಷ್ಯಮಾಡಿದ್ದೇಕೆ?” ಎಂದು ವಾದಿಸಿದೆನು. ಬಿಟ್ಟುಹೋದವರನ್ನು ತಿರಿಗಿ ಕರೆಯಿಸಿ, ಅವರನ್ನು ಅವರವರ ಉದ್ಯೋಗಗಳಲ್ಲಿ ಇರಿಸಿದೆನು.