Nehemiah 13:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಆ ವ್ಯಾಪಾರಸ್ತರಿಗೆ, “ನೀವು ಬಾಗಿಲಿಗೆದುರಾಗಿ ನಗರದ ಹೊರಗೆ ರಾತ್ರಿ ಉಳಿದುಕೊಳ್ಳಬಾರದು. ಹಾಗೆ ಮಾಡಿದ್ದಲ್ಲಿ ನಿಮ್ಮನ್ನು ದಸ್ತಗಿರಿ ಮಾಡಬೇಕಾಗುವದು” ಎಂದು ಎಚ್ಚರಿಸಿದೆನು. ಅಂದಿನಿಂದ ಅವರು ಸಬ್ಬತ್ ದಿನದಲ್ಲಿ ನಗರಕ್ಕೆ ವ್ಯಾಪಾರಕ್ಕಾಗಿ ಬರುವುದನ್ನು ನಿಲ್ಲಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೊನೆಗೆ ನಾನು ಅವರಿಗೆ, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಪುನಃ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು” ಎಂದು ಗದರಿಸಲು, ಅವರು ಅಂದಿನಿಂದ ಸಬ್ಬತ್ ದಿನದಲ್ಲಿ ಪುನಃ ಬರಲೇ ಇಲ್ಲ.
Kannada BSI Bible 2016
ಆಗ ನಾನು ಅವರನ್ನು ಗದರಿಸಿ ಅವರಿಗೆ--ನೀವು ಕೋಟೆಯ ಮುಂದೆ ಇಳುಕೊಂಡಿರುವದೇನು? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮ ಮೇಲೆ ಕೈ ಹಾಕುವೆನು ಅಂದೆನು. ಆ ಹೊತ್ತಿನಿಂದ ಅವರು ಸಬ್ಬತ್ ದಿವಸದಲ್ಲಿ ಬರಲೇ ಇಲ್ಲ;
Kannada BSI JV (ಕನ್ನಡ ಸತ್ಯವೇದವು J.V. (BSI))
ಕಡೆಯಲ್ಲಿ ನಾನು ಅವರನ್ನು - ನೀವು ಗೋಡೆಯ ಹೊರಗೇಕೆ ಇಳುಕೊಂಡಿದ್ದೀರಿ? ನೀವು ತಿರಿಗಿ ಹೀಗೆ ಮಾಡಿದರೆ ನಿಮ್ಮನ್ನು ಹಿಡಿಸುವೆನು ಎಂದು ಗದರಿಸಲು ಅವರು ಅಂದಿನಿಂದ ಸಬ್ಬತ್‍ದಿನದಲ್ಲಿ ತಿರಿಗಿ ಬರಲಿಲ್ಲ.
Kannada Bible (KNCL) BSI 2016
ಕಡೆಗೆ ನಾನು ಅವರನ್ನು, “ನೀವು ಗೋಡೆಯ ಹೊರಗೇಕೆ ಇಳಿದುಕೊಂಡಿದ್ದೀರಿ? ನೀವು ಮತ್ತೆ ಹೀಗೆ ಮಾಡಿದರೆ ನಿಮ್ಮನ್ನು ಸೆರೆಹಿಡಿಸುವೆನು,” ಎಂದು ಗದರಿಸಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಾನು ಅವರನ್ನು ಗದರಿಸಿ ಅವರಿಗೆ, “ನೀವು ಕೋಟೆಯ ಗೋಡೆಯ ಹೊರಗೆ ಏಕೆ ಇಳುಕೊಂಡಿದ್ದೀರಿ? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮನ್ನು ಸೆರೆಗೆ ಹಾಕುವೆನು,” ಎಂದೆನು. ಆ ದಿನದಿಂದ ಅವರು ಸಬ್ಬತ್ ದಿನದಲ್ಲಿ ಬರಲೇ ಇಲ್ಲ.