Nehemiah 13:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇದೆಲ್ಲಾ ನಡೆಯುತ್ತಿರುವಾಗ ನಾನು ಜೆರುಸಲೇಮಿನಲ್ಲಿರಲಿಲ್ಲ. ನಾನು ಬಾಬಿಲೋನಿನ ಅರಸನ ಬಳಿಗೆ ಹಿಂತಿರುಗಿದ್ದೆನು. ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅವನ ಬಳಿಗೆ ಹೋದೆನು. ಸ್ವಲ್ಪಕಾಲವಾದ ಬಳಿಕ ಅರಸನ ಅಪ್ಪಣೆಯೊಂದಿಗೆ ನಾನು ಹಿಂತಿರುಗಿ ಜೆರುಸಲೇಮಿಗೆ ಬಂದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾಬಿಲೋನಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅರಸನ ಬಳಿಗೆ ಹೋಗಿದ್ದೆನು. ಇದೆಲ್ಲಾ ನಡೆಯುವಾಗ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ. ಕಾಲಾಂತರದಲ್ಲಿ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು,
Kannada BSI Bible 2016
ಆದರೆ ಇಷ್ಟು ಕಾಲಕ್ಕೆ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ; ಬಾಬೆಲಿನ ಅರಸನಾದ ಅರ್ತಷಸ್ತನ ಮೂವ ತ್ತೆರಡನೇ ವರುಷದಲ್ಲಿ, ನಾನು ಅರಸನ ಬಳಿಗೆ ಬಂದು ಸ್ವಲ್ಪಕಾಲದ ತರುವಾಯ ನಾನು ಅರಸನಿಂದ ಅಪ್ಪಣೆ ಯನ್ನು ತೆಗೆದುಕೊಂಡು
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಬೆಲಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರುಷದಲ್ಲಿ ಅರಸನ ಬಳಿಗೆ ಹೋಗಿದ್ದೆನಾದದರಿಂದ ಇದೆಲ್ಲಾ ನಡೆಯುವಾಗ ನಾನು ಯೆರೂಸಲೇವಿುನಲ್ಲಿರಲಿಲ್ಲ. ಕಾಲಾಂತರದಲ್ಲಿ ನಾನು ಅರಸನಿಂದ ಅಪ್ಪಣೆಪಡಕೊಂಡು
Kannada Bible (KNCL) BSI 2016
ನಾನು ಬಾಬಿಲೋನಿನ ಅರಸ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ಅರಸನ ಬಳಿಗೆ ಹೋಗಿದ್ದೆ. ಆದುದರಿಂದ ಇದೆಲ್ಲಾ ನಡೆಯುವಾಗ ನಾನು ಜೆರುಸಲೇಮಿನಲ್ಲಿರಲಿಲ್ಲ. ಕ್ರಮೇಣ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಇವೆಲ್ಲಾ ಸಂಭವಿಸುವಾಗ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ. ಬಾಬಿಲೋನಿನ ಅರಸನಾದ ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅರಸನ ಬಳಿಗೆ ಹೋಗಿದ್ದೆ. ತರುವಾಯ ನಾನು ಅರಸನಿಂದ ಅಪ್ಪಣೆ ಪಡೆದುಕೊಂಡು,