Nehemiah 13:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಕೋಣೆಗಳನ್ನು ಶುದ್ಧಮಾಡಲು ನಾನು ಆಜ್ಞೆ ಮಾಡಿದೆನು. ಆಮೇಲೆ ದೇವಾಲಯದ ಪಾತ್ರೆಗಳನ್ನು, ವಸ್ತುಗಳನ್ನು, ಧಾನ್ಯಸಮರ್ಪಣೆಗಳನ್ನು ಮತ್ತು ಧೂಪವನ್ನು ಆ ಕೋಣೆಯೊಳಗೆ ತಂದಿಟ್ಟೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೊಠಡಿಯನ್ನು ಶುದ್ಧಮಾಡುವುದಕ್ಕಾಗಿ ಅಪ್ಪಣೆಕೊಟ್ಟು ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯದ್ರವ್ಯ, ಧೂಪ ಇವುಗಳನ್ನು ಪುನಃ ಆ ಕೊಠಡಿಯಲ್ಲಿ ಇಡಿಸಿದೆನು.
Kannada BSI Bible 2016
ಆಗ ನಾನು ಹೇಳಿದ್ದ ರಿಂದ ಅವರು ಕೊಠಡಿಗಳನ್ನು ಶುಚಿಮಾಡಿದರು. ತರುವಾಯ ದೇವರ ಆಲಯದ ಸಾಮಾನುಗಳನ್ನೂ ಅಪಾರ ಸಮರ್ಪಣೆಗಳನ್ನೂ ಧೂಪವರ್ಗವನ್ನೂ ತಿರಿಗಿ ಅಲ್ಲಿಗೆ ತಂದು ಇಡಿಸಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕೊಠಡಿಯನ್ನು ಶುದ್ಧಿಮಾಡುವದಕ್ಕೆ ಅಪ್ಪಣೆಕೊಟ್ಟು ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯ ದ್ರವ್ಯ, ಧೂಪ ಇವುಗಳನ್ನು ತಿರಿಗಿ ಅಲ್ಲಿಡಿಸಿದೆನು.
Kannada Bible (KNCL) BSI 2016
ಆ ಕೊಠಡಿಯಿಂದ ಹೊರಗೆ ಹಾಕಿಸಿ ಕೊಠಡಿಯನ್ನು ಶುದ್ಧಮಾಡುವುದಕ್ಕೆ ಅಪ್ಪಣೆಕೊಟ್ಟೆ. ಅದು ಶುದ್ಧಮಾಡುವುದಕ್ಕೆ ಅಪ್ಪಣೆಕೊಟ್ಟೆ. ಅದು ಶುದ್ಧವಾದ ಮೇಲೆ ದೇವಾಲಯದ ಪಾತ್ರೆ, ನೈವೇದ್ಯದ್ರವ್ಯ, ಧೂಪ ಇವುಗಳನ್ನು ಪುನಃ ಅಲ್ಲಿಡಿಸಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ನಾನು ಹೇಳಿದ್ದರಿಂದ ಅವರು ಕೊಠಡಿಗಳನ್ನು ಶುದ್ಧ ಮಾಡಿದರು. ತರುವಾಯ ದೇವರ ಆಲಯದ ಪಾತ್ರೆಗಳನ್ನೂ ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತಿರುಗಿ ಅಲ್ಲಿ ತಂದು ಇಡಿಸಿದೆನು.