Nehemiah 2:11 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಜೆರುಸಲೇಮ್ ಸೇರಿದ ನಂತರ ಮೂರು ದಿವಸ ಅಲ್ಲಿಯೇ ಉಳಿದೆನು. ಜೆರುಸಲೇಮಿಗೋಸ್ಕರ ಮಾಡತಕ್ಕ ಕಾರ್ಯದ ಬಗ್ಗೆ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಸಿದ್ದಾನೆಂದು ನಾನು ಯಾರಿಗೂ ತಿಳಿಸದೆ ನನ್ನೊಂದಿಗಿದ್ದ ಕೆಲವು ಜನರೊಂದಿಗೆ ರಾತ್ರಿಯಲ್ಲಿ ಹೊರಟೆನು. ನಾನು ಸವಾರಿಮಾಡಿಕೊಂಡು ಬಂದಿದ್ದ ಕುದುರೆಯೊಂದಲ್ಲದೆ ಬೇರೆ ಯಾವ ಕುದುರೆಯೂ ಅಲ್ಲಿರಲಿಲ್ಲ. (Verses 11-12)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿನಗಳವರೆಗೂ ಇದ್ದೆನು.
Kannada BSI Bible 2016
ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿವಸ ಇದ್ದ ತರುವಾಯ ನಾನೂ ನನ್ನ ಸಂಗಡ ಇರುವ ಕೆಲವರೂ ರಾತ್ರಿಯಲ್ಲಿ ಎದ್ದೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಯೆರೂಸಲೇವಿುಗೆ ಬಂದೆನು. ಅಲ್ಲಿ ಮೂರು ದಿನಗಳಿದ್ದ ಮೇಲೆ
Kannada Bible (KNCL) BSI 2016
ಅನಂತರ ಜೆರುಸಲೇಮಿಗೆ ಬಂದೆ. ಅಲ್ಲಿ ಮೂರು ದಿನಗಳಿದ್ದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿವಸ ಇದ್ದ ತರುವಾಯ, ನಾನೂ, ನನ್ನ ಸಂಗಡ ಇರುವ ಕೆಲವರೂ ರಾತ್ರಿಯಲ್ಲಿ ಎದ್ದೆವು.