Nehemiah 3:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹಲ್ಲೊಹೇಷನ ಮಗನಾದ ಶಲ್ಲೂಮನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಅವನ ಹೆಣ್ಣುಮಕ್ಕಳು ಅವನಿಗೆ ಸಹಾಯ ಮಾಡಿದರು. ಶಲ್ಲೂಮನು ಜೆರುಸಲೇಮಿನ ಇನ್ನೊಂದು ಭಾಗದ ರಾಜ್ಯಪಾಲನಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರ ಆಚೆಗೆ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇಮಿನ ಅರ್ಧ ಪಟ್ಟಣಗಳ ಒಡೆಯನೂ, ಹಲ್ಲೊಹೇಷನ ಮಗನೂ ಆದ ಶಲ್ಲೂಮ ಮತ್ತು ಅವನ ಪುತ್ರಿಯರು.
Kannada BSI Bible 2016
ಇವರ ತರುವಾಯ ಯೆರೂಸ ಲೇಮಿನ ಅರ್ಧಕ್ಕೆ ಅಧಿಪತಿಯಾದ ಹಲ್ಲೊಹೇಷನ ಮಗನಾದ ಶಲ್ಲೂಮನೂ ಅವನ ಕುಮಾರ್ತೆಯರೂ ಭದ್ರಪಡಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನ ಸಮೀಪದಲ್ಲಿ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇವಿುನ ಅರೆನಾಡೊಡೆಯನೂ ಹಲ್ಲೊಹೇಷನ ಮಗನೂ ಆದ ಶಲ್ಲೂಮನೂ ಅವನ ಕುಮಾರಿಯರೂ.
Kannada Bible (KNCL) BSI 2016
ಇವನ ಸಮೀಪದಲ್ಲಿ ಗೋಡೆಯನ್ನು ದುರಸ್ತುಮಾಡಿದವರು ಜೆರುಸಲೇಮಿನ ಅರೆನಾಡೊಡೆಯನೂ ಹಲ್ಲೊಹೇಷನ ಮಗನೂ ಆದ ಶಲ್ಲೂಮನು ಹಾಗು ಅವನ ಕುಮಾರಿಯರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವನ ಸಮೀಪದಲ್ಲಿ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇಮಿನ ಅರೆನಾಡೊಡೆಯನೂ, ಹಲ್ಲೋಹೇಷನ ಮಗನೂ ಆದ ಶಲ್ಲೂಮನೂ, ಅವನ ಕುಮಾರಿಯರೂ.