Nehemiah 3:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜಾನೋಹ ಪಟ್ಟಣದಲ್ಲಿ ವಾಸಿಸುವ ಹಾನೂನನೂ ಅವನ ಸಂಗಡಿಗರೂ ಕಣಿವೆ ಬಾಗಿಲನ್ನು ಕಟ್ಟಿ ಅದಕ್ಕೆ ಅಗುಳಿ, ತಿರುಗಣಿ, ಕದಗಳನ್ನಿಟ್ಟು ಭದ್ರಪಡಿಸಿದರು. ಅಲ್ಲದೆ ಒಂದು ಸಾವಿರ ಮೊಳದಷ್ಟು ಉದ್ದದ ಗೋಡೆಯನ್ನು ಕಟ್ಟಿ ತಿಪ್ಪೆಬಾಗಿಲಿನ ತನಕ ಮುಂದುವರಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಗ್ಗಿನ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಹಾನೂನನೂ, ಜಾನೋಹ ಊರಿನವರು. ಇವರು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿ ಅಲ್ಲಿಂದ ತಿಪ್ಪೆ ಬಾಗಿಲಿನವರೆಗೂ ಸಾವಿರ ಮೊಳದ ಗೋಡೆಯನ್ನು ಕಟ್ಟಿದರು.
Kannada BSI Bible 2016
ತಗ್ಗಿನ ಬಾಗಲನ್ನು ಹಾನೂನನೂ ಜಾನೋಹನ ನಿವಾಸಿಗಳೂ ಭದ್ರಪಡಿಸಿದರು. ಇವರು ಅದನ್ನು ಕಟ್ಟಿ ಅದರ ಕದಗಳನ್ನೂ ಜೋಡಣೆಗಳನ್ನೂ ಅಗುಳಿ ಗಳನ್ನೂ ನಿಲ್ಲಿಸಿ ತಿಪ್ಪೆ ಬಾಗಿಲ ವರೆಗೆ ಸಾವಿರ ಮೊಳ ಗೋಡೆಯನ್ನು ಕಟ್ಟಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಗ್ಗಿನ ಬಾಗಲನ್ನು ಜೀರ್ಣೋದ್ಧಾರಮಾಡಿದವರು ಹಾನೂನನೂ ಜಾನೋಹ ಊರಿನವರೂ. ಇವರು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಕದ ತಿರುಗಣಿ ಅಗುಳಿಗಳನ್ನು ಹಚ್ಚಿ ಅಲ್ಲಿಂದ ತಿಪ್ಪೆಬಾಗಲಿನವರೆಗೂ ಸಾವಿರ ಮೊಳದ ಗೋಡೆಯನ್ನು ಕಟ್ಟಿದರು.
Kannada Bible (KNCL) BSI 2016
ಕಣಿವೆಯ ಬಾಗಿಲನ್ನು ಸರಿಪಡಿಸಿದವರು ಹಾನೂನನು ಹಾಗು ಜಾನೋಹ ಊರಿನವರು. ಇವರು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಕದ, ತಿರುಗಣಿ, ಅಗುಳಿಗಳನ್ನು ಹಚ್ಚಿ ಅಲ್ಲಿಂದ ತಿಪ್ಪೆಬಾಗಿಲಿನವರೆಗೂ ಸಾವಿರ ಮೊಳದ ಗೋಡೆಯನ್ನು ಕಟ್ಟಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಗ್ಗಿನ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಹಾನೂನನೂ, ಜಾನೋಹ ಊರಿನವರೂ. ಇವರು ಅದರ ಗೋಡೆಯನ್ನು ಕಟ್ಟಿ, ಅದಕ್ಕೆ ಕದ ತಿರುಗಣಿ ಅಗುಳಿಗಳನ್ನು ಹಚ್ಚಿ, ಅಲ್ಲಿಂದ ತಿಪ್ಪೆ ಬಾಗಿಲಿನವರೆಗೂ 450 ಮೀಟರ್ ಗೋಡೆಯನ್ನು ಕಟ್ಟಿದರು.