Nehemiah 3:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಜ್ಬೂಕನ ಮಗನಾದ ನೆಹೆಮೀಯನು ಗೋಡೆಯ ಮುಂದಿನ ಭಾಗವನ್ನು ಕಟ್ಟಿದನು. ಇವನು ಬೇತ್ಚೂರ್ ಜಿಲ್ಲೆಯ ಅರ್ಧಭಾಗಕ್ಕೆ ಅಧಿಕಾರಿಯಾಗಿದ್ದನು. ದಾವೀದನ ಸಮಾಧಿಯ ತನಕ ಗೋಡೆಯನ್ನು ಮುಂದುವರಿಸಿ ವೀರರ ಮನೆಗಳ ತನಕ ಕಟ್ಟಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನ ನಂತರ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯಿಗಳ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವರು ಬೇತ್ಚೂರಿನ ಒಡೆಯನೂ, ಅಜ್ಬೂಕನ ಮಗನೂ ಆದ ನೆಹೆಮೀಯನು.
Kannada BSI Bible 2016
ಇವನ ತರುವಾಯ ಬೇತ್ಚೂರಿನ ಅರ್ಧಪಾಲಿಗೆ ಅಧಿಪತಿಯಾದ ಅಜ್ಬೂಕನ ಮಗನಾದ ನೆಹೆವಿಾ ಯನು ದಾವೀದನ ಸಮಾಧಿಗಳಿಗೆ ಎದುರಾಗಿರುವ ಸ್ಥಳದ ಮಟ್ಟಿಗೂ ಅಗೆಯಲ್ಪಟ್ಟ ಕುಂಟೆಯ ಮಟ್ಟಿಗೂ ಪರಾಕ್ರಮಿಗಳ ಮನೆಯ ಮಟ್ಟಿಗೂ ಇರುವದನ್ನು ಭದ್ರಪಡಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನ ಆಚೆ ಅಂದರೆ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯರ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವನು ಬೇತ್ಚೂರಿನ ಅರೆನಾಡೊಡೆಯನೂ ಅಜ್ಬೂಕನ ಮಗನೂ ಆದ ನೆಹೆಮೀಯನು.
Kannada Bible (KNCL) BSI 2016
ಇವನ ಆಚೆ ಅಂದರೆ, ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯಿಗಳ ಠಾಣ, ಇವುಗಳವರೆಗೂ ದುರಸ್ತುಮಾಡಿದವನು ಬೇತ್ಚೂರಿನ ಅರೆನಾಡೊಡೆಯನೂ ಅಜ್ಬೂಕನ ಮಗನೂ ಆದ ನೆಹೆಮೀಯನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವನ ಆಚೆ ಎಂದರೆ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯರ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವನು ಬೇತ್ ಚೂರಿನ ಅರೆನಾಡೊಡೆಯನೂ, ಅಜ್ಬೂಕನ ಮಗನೂ ಆದ ನೆಹೆಮೀಯನು.