Nehemiah 3:31 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ವರ್ತಕರ ಮತ್ತು ಆಲಯದ ಸೇವಕರ ಮನೆಗಳ ತನಕದ ಭಾಗವನ್ನು ಮಲ್ಕೀಯನು ರಿಪೇರಿ ಮಾಡಿದನು. ಇದು, “ತನಿಕೆ” ಎಂಬ ಬಾಗಿಲಿನ ಎದುರಿನಲ್ಲಿತ್ತು. ಮೂಲೆಗೋಡೆಯ ಮೇಲಿರುವ ಕೋಣಿಯ ತನಕದ ಭಾಗವನ್ನು ಅಕ್ಕಸಾಲಿಗನಾದ ಮಲ್ಕೀಯನು ರಿಪೇರಿ ಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ. ಇವನು ಸೈನ್ಯದವರು ಸೇರಿಬರುವ ಬಾಗಿಲಿನೆದುರಿನಲ್ಲಿರುವ ದೇವಾಲಯದ ಸೇವಕರ ಮತ್ತು ವರ್ತಕರ ಕೇರಿಯ ವರೆಗೂ ಮತ್ತು ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು.
Kannada BSI Bible 2016
ಇವನ ತರುವಾಯ ಅಕ್ಕಸಾಲೆಯವನ ಮಗನಾದ ಮಲ್ಕೀಯನು ಮಿಫ್ಕಾದೆಂಬ ಬಾಗಲಿಗೆದುರಾದ ನೆತಿನಿ ಯರ ಸ್ಥಳವೂ ವರ್ತಕರ ಸ್ಥಳವೂ ಮೊದಲ್ಗೊಂಡು ಮೂಲೆಯ ಮಟ್ಟಿಗೂ ಭದ್ರಪಡಿಸಿದನು.ಮೂಲೆ ಮೊದಲ್ಗೊಂಡು ಕುರಿಬಾಗಲ ಮಟ್ಟಿಗೂ ಇರುವದನ್ನು ಅಕ್ಕಸಾಲೆಯರೂ ವರ್ತಕರೂ ಭದ್ರಪಡಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ; ಇವನು ದಂಡುಕೂಡುವ ಬಾಗಲಿನೆದುರಿನಲ್ಲಿರುವ ದೇವಸ್ಥಾನದಾಸರ ಮತ್ತು ವರ್ತಕರ ಕೇರಿಯವರೆಗೂ ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು.
Kannada Bible (KNCL) BSI 2016
ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ; ಇವನು ದಂಡುಕೂಡುವ ಬಾಗಿಲಿನ ಎದುರಿನಲ್ಲಿರುವ ದೇವಸ್ಥಾನ ಪರಿಚಾರಕರ ಮತ್ತು ವರ್ತಕರ ಕೇರಿಯವರೆಗೂ ಮೂಲೆಯುಪ್ಪರಿಗೆಯವರೆಗೂ ದುರಸ್ತಿಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ, ಇವನು ದಂಡು ಕೊಡುವ ಬಾಗಿಲಿನೆದುರಿನಲ್ಲಿರುವ ದೇವಾಲಯದ ಸೇವಕರ ಮತ್ತು ವರ್ತಕರ ಕೇರಿಯವರೆಗೂ ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು.