Nehemiah 3:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇವನ ನಂತರ ಊರೀಯನ ಮಗನಾದ ಮೆರೇಮೋತನು ಗೋಡೆಯನ್ನು ಕಟ್ಟಿದನು. (ಊರೀಯನು ಹಕ್ಕೋಚನ ಮಗ.) ಇದರ ಮುಂದಿನ ಭಾಗವನ್ನು ಬೆರೆಕ್ಯನ ಮಗನಾದ ಮೆಷುಲ್ಲಾಮನು ಕಟ್ಟಿದನು. (ಬೆರೆಕ್ಯನು ಮೆಷೇಜಬೇಲನ ಮಗ.) ಈ ಗೋಡೆಯ ನಂತರದ ಭಾಗವನ್ನು ಬಾನನ ಮಗನಾದ ಚಾದೋಕನು ಕಟ್ಟಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಲ್ಲಿಂದ ಮುಂದಕ್ಕೆ ಗೋಡೆಯನ್ನು ದುರಸ್ತಿ ಮಾಡಿಸಿದವನು ಊರೀಯನ ಮಗನೂ ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್. ಆ ಮೇಲೆ ಬೆರೆಕ್ಯನ ಮಗನೂ ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ನಂತರ ಬಾನನ ಮಗನಾದ ಚಾದೋಕ್; ಮುಂದಕ್ಕೆ ತೆಕೋವದವರು.
Kannada BSI Bible 2016
ಇವರ ತರುವಾಯ ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಹಳೇದನ್ನು ಭದ್ರಪಡಿಸಿದನು. ಇವರ ತರುವಾಯ ಮೆಷೇಜಬೇಲನ ಮಗನಾದ ಬೆರೆಕ್ಯನ ಮಗನಾದ ಮೆಷುಲ್ಲಾಮನು ಹಳೇದನ್ನು ಭದ್ರಪಡಿಸಿದನು; ಇವರ ತರುವಾಯ ಬಾಣನ ಮಗನಾದ ಚಾದೋಕನು ಭದ್ರ ಪಡಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಲ್ಲಿಂದ ಮುಂದಕ್ಕೆ ಗೋಡೆಯನ್ನು ಜೀರ್ಣೋದ್ಧಾರಮಾಡಿಸಿದವನು ಊರೀಯನ ಮಗನೂ ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್; ಆಮೇಲೆ ಬೆರೆಕ್ಯನ ಮಗನೂ ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ಆಚೆಗೆ ಬಾನನ ಮಗನಾದ ಚಾದೋಕ್; ಮುಂದಕ್ಕೆ ತೆಕೋವದವರು.
Kannada Bible (KNCL) BSI 2016
ಅಲ್ಲಿಂದ ಮುಂದಕ್ಕೆ ಗೋಡೆಯನ್ನು ದುರಸ್ತಿಮಾಡಿಸಿದವನು ಊರೀಯನ ಮಗನೂ ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್; ಆಮೇಲೆ ಬೆರೆಕ್ಯನ ಮಗನೂ ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ಆಚೆಗೆ ಬಾನನ ಮಗ ಚಾದೋಕ್; ಮುಂದಕ್ಕೆ ತೆಕೋವದವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜೀರ್ಣೋದ್ಧಾರ ಮಾಡಿಸಿದವನು ಊರೀಯನ ಮಗನೂ, ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್; ಆಮೇಲೆ ಬೆರೆಕ್ಯನ ಮಗನೂ, ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ಆಚೆಗೆ ಬಾಣನ ಮಗನಾದ ಚಾದೋಕ್,