Nehemiah 3:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹರ್ಹಯನ ಮಗನಾದ ಉಜ್ಜೀಯೇಲನು ಅಲ್ಲಿಂದಾಚೆಗೆ ಕಟ್ಟಿದನು. ಉಜ್ಜೀಯೇಲನು ಅಕ್ಕಸಾಲಿಗನಾಗಿದ್ದನು; ಹನನ್ಯನು ಸುಗಂಧದ್ರವ್ಯವನ್ನು ತಯಾರುಮಾಡುತ್ತಿದ್ದನು. ಇವರು, “ಅಗಲಗೋಡೆ”ಯವರೆಗೂ ಜೆರುಸಲೇಮ್ ಗೋಡೆಯನ್ನು ಕಟ್ಟಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಾದ ನಂತರ ಹರ್ಹಯನ ಮಗನಾದ ಅಕ್ಕಸಾಲಿಗನಾದ ಉಜ್ಜೀಯೇಲ್; ಆ ಮೇಲೆ ಗಾಣಿಗನಾದ ಹನನ್ಯ; ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು.
Kannada BSI Bible 2016
ಇವರ ತರುವಾಯ ಅಕ್ಕಸಾಲೆಯರಲ್ಲಿ ಒಬ್ಬನಾದಂಥ ಹರ್ಹಯನ ಮಗನಾದ ಉಜ್ಜಿಯೇಲನು ಭದ್ರಪಡಿಸಿದನು. ಇವನ ತರುವಾಯ ತೈಲಗಾರರಲ್ಲಿ ಒಬ್ಬನ ಮಗನಾದ ಹನನ್ಯನು ಭದ್ರಪಡಿಸಿದನು. ಇವರು ಅಗಲವಾದ ಗೋಡೆಯ ತನಕ ಯೆರೂಸಲೇ ಮನ್ನು ಬಲಪಡಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್; ಆಮೇಲೆ ಬುಕ್ಕಿಟ್ಟುಗಾರರ ಹನನ್ಯ; ಇವರು ಅಗಲ ಗೋಡೆಯೆನಿಸಿಕೊಳ್ಳುವ ಗೋಡೆಯ ಈಚೆಗಿರುವ ಯೆರೂಸಲೇವಿುನ ಭಾಗವನ್ನು ಗೋಡೆಯೊಳಗೆ ಸೇರಿಸಲಿಲ್ಲ.
Kannada Bible (KNCL) BSI 2016
ಇವರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್; ಆಮೇಲೆ ಬುಕ್ಕಿಟ್ಟುಗಾರರ ಹನನ್ಯ; ಇವರು ಅಗಲಗೋಡೆಯೆನಿಸಿಕೊಳ್ಳುವ ಗೋಡೆಯ ಆಚೆಗಿರುವ ಜೆರುಸಲೇಮಿನ ಭಾಗವನ್ನು ಗೋಡೆಯೊಳಗೆ ಸೇರಿಸಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್, ಆಮೇಲೆ ಗಾಣಿಗನಾದ ಹನನ್ಯ, ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು.