Nehemiah 4:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಮಗೆದುರಾಗಿ ಬಂದಿದ್ದ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅವಲೋಕಿಸಿ ನಮ್ಮ ಜನರೊಂದಿಗೆ ಕುಟುಂಬ ಕುಟುಂಬವಾಗಿ, ಅಧಿಕಾರಿಗಳಿಗೆ ಮತ್ತು ಉಳಿದ ಜನರಿಗೆ ಹೀಗೆ ಹೇಳಿದೆನು: “ನಮ್ಮ ವೈರಿಗಳ ಬಗ್ಗೆ ನೀವು ಏನೂ ಹೆದರಬೇಡಿರಿ. ನಮ್ಮ ದೇವರನ್ನು ನೆನಪುಮಾಡಿರಿ. ಯೆಹೋವನು ಬಲಶಾಲಿಯೂ ಸರ್ವಶಕ್ತನೂ ಆಗಿದ್ದಾನೆ. ನೀವು ನಿಮ್ಮ ಸಹೋದರರಿಗಾಗಿ, ನಿಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ನಿಮ್ಮನಿಮ್ಮ ಹೆಂಡತಿಯರಿಗಾಗಿ ಮತ್ತು ಮನೆಗಳಿಗಾಗಿ ಹೋರಾಡಿರಿ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ನಾನು ಅವರನ್ನು ಸಂದರ್ಶಿಸಿ ಅವರ ಮುಂದೆ ನಿಂತು ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಉಳಿದ ಜನರನ್ನೂ ಉದ್ದೇಶಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ, ಭಯಂಕರನೂ ಆಗಿರುವ ಕರ್ತನನ್ನು ನೆನಪುಮಾಡಿಕೊಂಡು ನಿಮ್ಮ ಸಹೋದರರಿಗಾಗಿಯೂ, ಗಂಡು ಹೆಣ್ಣು ಮಕ್ಕಳಿಗಾಗಿಯೂ, ಹೆಂಡತಿಯರಿಗಾಗಿಯೂ, ನಿಮ್ಮ ಮನೆಗಳಿಗೋಸ್ಕರವೂ ಹೋರಾಡಿರಿ” ಎಂದು ಹೇಳಿದೆನು.
Kannada BSI Bible 2016
ನಾನು ನೋಡಿದ ತರುವಾಯ ಎದ್ದು ಶ್ರೇಷ್ಠರಿಗೂ ಅಧಿಕಾರ ಸ್ಥರಿಗೂ ಇತರ ಜನರಿಗೂ--ನೀವು ಅವರಿಗೋಸ್ಕರ ಭಯಪಡಬೇಡಿರಿ; ದೊಡ್ಡವನಾಗಿಯೂ ಭಯಂಕರ ನಾಗಿಯೂ ಇರುವ ಕರ್ತನನ್ನು ಜ್ಞಾಪಕಮಾಡಿ ಕೊಂಡು ನಿಮ್ಮ ಸಹೋದರರಿಗೋಸ್ಕರ, ಕುಮಾರ, ಕುಮಾರ್ತೆಯರಿಗೋಸ್ಕರ, ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ ಅಂದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರನ್ನು ಸಂದರ್ಶಿಸಿ ಅವರ ಮುಂದೆ ನಿಂತು ಶ್ರೀಮಂತರನ್ನೂ ಅಧಿಕಾರಿಗಳನ್ನೂ ಉಳಿದ ಜನರನ್ನೂ ಸಂಬೋಧಿಸಿ - ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ ಭಯಂಕರನೂ ಆಗಿರುವ ಕರ್ತನನ್ನು ನೆನಪು ಮಾಡಿಕೊಂಡು ನಿಮ್ಮ ಸಹೋದರರಿಗೋಸ್ಕರವೂ ಗಂಡು ಹೆಣ್ಣು ಮಕ್ಕಳಿಗೋಸ್ಕರವೂ ಹೆಂಡತಿಯರಿಗೋಸ್ಕರವೂ ನಿಮ್ಮ ಮನೆಗಳಿಗೋಸ್ಕರವೂ ಕಾದಾಡಿರಿ ಎಂದು ಹೇಳಿದೆನು.
Kannada Bible (KNCL) BSI 2016
ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು, ಶ್ರೀಮಂತರನ್ನೂ ಅಧಿಕಾರಿಗಳನ್ನೂ ಉಳಿದ ಜನರನ್ನೂ ಸಂಬೋಧಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿ; ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ಸರ್ವೇಶ್ವರಸ್ವಾಮಿಯನ್ನು ಸ್ಮರಿಸಿಕೊಂಡು, ನಿಮ್ಮ ಸಹೋದರರಿಗಾಗಿ, ಮಡದಿಮಕ್ಕಳಿಗಾಗಿ ಹಾಗು ನಿಮ್ಮ ಮನೆಮಠಗಳಿಗಾಗಿ ಕಾದಾಡಿರಿ,” ಎಂದು ಹುರಿದುಂಬಿಸಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು ಶ್ರೇಷ್ಠರಿಗೂ, ಅಧಿಕಾರಸ್ಥರಿಗೂ, ಇತರ ಜನರಿಗೂ ಸಂಬೋಧಿಸಿ, “ನೀವು ಅವರಿಗೋಸ್ಕರ ಭಯಪಡಬೇಡಿರಿ. ದೊಡ್ಡವನಾಗಿಯೂ, ಭಯಂಕರನಾಗಿಯೂ ಇರುವ ಯೆಹೋವ ದೇವರನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಪುತ್ರರಿಗೋಸ್ಕರ, ಪುತ್ರಿಯರಿಗೋಸ್ಕರ, ನಿಮ್ಮ ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ,” ಎಂದೆನು.