Nehemiah 5:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೆರುಸಲೇಮಿನ ಗೋಡೆ ಕಟ್ಟುವ ಕೆಲಸದಲ್ಲಿ ನಾನು ತುಂಬಾ ಪ್ರಯಾಸಪಟ್ಟೆನು. ಗೋಡೆಯ ನಿರ್ಮಾಣ ಕೆಲಸಕ್ಕಾಗಿ ನನ್ನ ಜನರೆಲ್ಲರೂ ಒಟ್ಟಾಗಿ ಸೇರಿದರು. ನಾವು ಯಾರಿಂದಲೂ ಭೂಮಿಯನ್ನು ಕಿತ್ತುಕೊಳ್ಳಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮತ್ತು ನನ್ನ ಎಲ್ಲಾ ಸೇವಕರೂ ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆನು. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.
Kannada BSI Bible 2016
ಇದಲ್ಲದೆ ನಾನು ಈ ಗೋಡೆಯ ಕಾರ್ಯದಲ್ಲಿ ನೆಲೆಯಾಗಿದ್ದೆನು. ನಾವು ಭೂಮಿಯನ್ನು ಕೊಂಡುಕೊಳ್ಳಲಿಲ್ಲ. ನನ್ನ ಸೇವಕರೆಲ್ಲರು ಕೆಲಸಕ್ಕೆ ಕೂಡಿ ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ನನ್ನ ಎಲ್ಲಾ ಸೇವಕರೂ ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆನು. ನಾವು ಅಲ್ಲಿ ಭೂಸ್ಥಿತಿಯನ್ನು ಸಂಪಾದಿಸಿಕೊಂಡಿರಲಿಲ್ಲ.
Kannada Bible (KNCL) BSI 2016
ಆ ಗೋಡೆ ಕಟ್ಟುವುದರಲ್ಲೇ ನಿರತನಾಗಿದ್ದೆ; ಮತ್ತು ನನ್ನ ಎಲ್ಲಾ ಸೇವಕರು ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆ. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಗೋಡೆ ಕಟ್ಟುವುದರಲ್ಲೇ ನಿರತನಾಗಿದ್ದೆ ಮತ್ತು ನನ್ನ ಎಲ್ಲಾ ಸೇವಕರು ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆ. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.