Nehemiah 6:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಮ್ಮ ವೈರಿಗಳೆಲ್ಲಾ ಕೆಲಸ ಸಂಪೂರ್ಣವಾದದ್ದನ್ನು ಕೇಳಿದರು. ನಮ್ಮ ಸುತ್ತುಮುತ್ತಲಿನ ಪ್ರಾಂತ್ಯಗಳವರಿಗೂ ದೇಶಗಳವರಿಗೂ ಈ ಸುದ್ದಿಮುಟ್ಟಿತು. ಆಗ ಅವರ ಧೈರ್ಯವು ಕುಗ್ಗಿತು. ಯಾಕೆಂದರೆ ಈ ಮಹಾಕಾರ್ಯವನ್ನು ನಮ್ಮ ದೇವರ ಸಹಾಯದಿಂದಲೇ ನಾವು ಮಾಡಿದ್ದೇವೆಂದು ಅವರಿಗೆ ಅರ್ಥವಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಸುದ್ದಿಯು ನಮ್ಮ ವಿರೋಧಿಗಳಾದ ಸುತ್ತಣ ಎಲ್ಲಾ ಜನಾಂಗದವರಿಗೆ ತಲುಪಿದಾಗ ಅವರು ಭಯವುಳ್ಳವರಾಗಿ ಸೊಕ್ಕನ್ನು ಬಿಟ್ಟು ಬಹಳ ಮನಗುಂದಿ ತಗ್ಗಿ ಹೋದರು. ಈ ಕಾರ್ಯವು ದೇವರ ಸಹಾಯದಿಂದಲೇ ಪೂರ್ಣಗೊಂಡಿತು ಎಂಬುದು ಅವರಿಗೆ ತಿಳಿದುಬಂದಿತು.
Kannada BSI Bible 2016
ನಮ್ಮ ಶತ್ರುಗಳು ಅದನ್ನು ಕೇಳಿದಾಗಲೂ ನಮ್ಮ ಸುತ್ತಲಿದ್ದ ಜನಾಂಗಗಳು ಇದನ್ನು ನೋಡಿ ದಾಗಲೂ ಅವರು ತಮ್ಮ ದೃಷ್ಟಿಯಲ್ಲಿ ಬಹಳ ಕುಂದಿ ಹೋದರು. ಯಾಕಂದರೆ ಈ ಕಾರ್ಯವು ನಮ್ಮ ದೇವರಿಂದ ಉಂಟಾಯಿತೆಂದು ಅವರು ತಿಳಿದು ಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಸುದ್ದಿಯು ನಮ್ಮ ವಿರೋಧಿಗಳಾದ ಸುತ್ತಣ ಎಲ್ಲಾ ಜನಾಂಗಗಳವರಿಗೆ ಮುಟ್ಟಿದಾಗ ಅವರು ಭಯವುಳ್ಳವರಾಗಿ ಸೊಕ್ಕನ್ನು ಬಿಟ್ಟು ಬಹಳ ಮನಗುಂದಿದವರಾದರು. ಈ ಕಾರ್ಯವು ನಮ್ಮ ದೇವರಿಂದಲೇ ಪೂರೈಸಿತು ಎಂದು ಅವರಿಗೆ ಮಂದಟ್ಟಾಯಿತು.
Kannada Bible (KNCL) BSI 2016
ಈ ಸುದ್ದಿ ಸುತ್ತ-ಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಸುದ್ದಿ ಸುತ್ತಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು.