Nehemiah 7:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ನನ್ನ ದೇವರು ನಮ್ಮ ಜನರನ್ನು ಒಟ್ಟುಗೂಡಿಸುವಂತೆ ನನ್ನನ್ನು ಪ್ರೇರೇಪಿಸಿದನು. ಅಂತೆಯೇ ನಾನು ಎಲ್ಲಾ ಗಣ್ಯರನ್ನು, ಅಧಿಕಾರಿಗಳನ್ನು ಮತ್ತು ಸಾಮಾನ್ಯರನ್ನು ಒಟ್ಟಾಗಿ ಸೇರಿಬರಲು ಆಮಂತ್ರಿಸಿದೆನು. ಇವರ ಕುಟುಂಬಗಳ ಪಟ್ಟಿಯನ್ನು ನಾನು ಮಾಡಬೇಕಿತ್ತು. ಮೊಟ್ಟಮೊದಲನೆಯ ಸಾರಿ ಸೆರೆಯಿಂದ ಹಿಂತಿರುಗಿ ಬಂದ ಸಂಸಾರಗಳ ಪಟ್ಟಿಯು ನನಗೆ ದೊರೆಯಿತು. ಅದರ ವಿವರ ಹೀಗಿದೆ:
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಗಣ್ಯರನ್ನು, ಶ್ರೀಮಂತರನ್ನೂ, ಅಧಿಕಾರಿಗಳನ್ನೂ, ಸಾಧಾರಣ ಜನರನ್ನೂ ಜನಗಣತಿಗಾಗಿ ಸಭೆಸೇರಿಸಿದನು. ಆಗ ಯೆರೂಸಲೇಮಿಗೆ ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದೇನೆಂದರೆ,
Kannada BSI Bible 2016
ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸಲ್ಪಡುವ ಹಾಗೆ ಪ್ರಮುಖರನ್ನೂ ಅಧಿಕಾರಸ್ಥರನ್ನೂ ಜನರನ್ನೂ ಕೂಡಿಸಿ ಕೊಳ್ಳಲು ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿ ಸಿದನು. ಆಗ ನಾನು ಮೊದಲಿನಲ್ಲಿ ಬಂದವರ ವಂಶಾ ವಳಿಯ ಪತ್ರಿಕೆಯನ್ನು ಕಂಡೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲಾಗಿ ನಾನು ನನ್ನ ದೇವರ ಪ್ರೇರಣೆಯಿಂದ ಶ್ರೀಮಂತರನ್ನೂ ಅಧಿಕಾರಿಗಳನ್ನೂ ಸಾಧಾರಣಜನರನ್ನೂ ಖಾನೇಷುಮಾರಿಗೋಸ್ಕರ ಕೂಡಿಸಿದೆನು. ಆಗ [ಯೆರೂಸಲೇವಿುಗೆ] ಮೊದಲು ಬಂದವರ ಹೆಸರುಗಳ ಪಟ್ಟಿಯು ನನಗೆ ಸಿಕ್ಕಿತು. ಅದರಲ್ಲಿ ಬರೆದಿದ್ದದ್ದೇನಂದರೆ -
Kannada Bible (KNCL) BSI 2016
ಹೀಗಿರಲು, ನಾನು ನನ್ನ ದೇವರ ಪ್ರೇರಣೆಯಿಂದ ಶ್ರೀಮಂತರನ್ನು, ಅಧಿಕಾರಿಗಳನ್ನು ಹಾಗು ಜನಸಾಮಾನ್ಯರನ್ನು ಜನಗಣತಿಗಾಗಿ ಸಭೆಸೇರಿಸಿದೆ. ಆಗ ಜೆರುಸಲೇಮಿಗೆ ಮೊದಲು ಹಿಂದಿರುಗಿ ಬಂದವರ ಹೆಸರುಗಳ ಪಟ್ಟಿ ನನಗೆ ಸಿಕ್ಕಿತು. ಅದರಲ್ಲಿ ಹೀಗೆ ಬರೆದಿತ್ತು:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸುವ ಹಾಗೆ ಶ್ರೇಷ್ಠರನ್ನೂ, ಅಧಿಕಾರಸ್ಥರನ್ನೂ, ಸಾಮಾನ್ಯ ಜನರನ್ನೂ ಸಭೆಯಾಗಿಸೇರಲು, ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿಸಿದರು. ಆಗ ನಾನು ಮೊದಲು ಬಂದವರ ವಂಶಾವಳಿಯ ಪಟ್ಟಿಯನ್ನು ಕಂಡೆನು. ಅದರಲ್ಲಿ ಬರೆದದ್ದೇನೆಂದರೆ: