Nehemiah 7:64 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಾಡಿದರೂ ಸಿಗಲಿಲ್ಲ. ತಮ್ಮ ಪೂರ್ವಿಕರು ಯಾಜಕರೆಂದು ರುಜುವಾತು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಯಾಜಕ ಪಟ್ಟಿಯಲ್ಲಿ ಅವರನ್ನು ಸೇರಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅವರನ್ನು ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.
Kannada BSI Bible 2016
ಇವರು ವಂಶಾವಳಿಯಾಗಿ ಬರೆಯಲ್ಪಟ್ಟವರಲ್ಲಿ ತಮ್ಮ ಹೆಸರು ಗಳನ್ನು ಹುಡುಕಿದರು; ಆದರೆ ಸಿಕ್ಕದೆ ಹೋದದ ರಿಂದ ಅವರು ಅಶುಚಿಯಾದವರೆಂದು ಎಣಿಸಲ್ಪಟ್ಟು ಯಾಜಕ ಉದ್ಯೋಗದಿಂದ ತೆಗೆದುಹಾಕಲ್ಪಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಳ್ಳಲ್ಪಟ್ಟರು.
Kannada Bible (KNCL) BSI 2016
ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕಾ ಸೇವೆಯಿಂದ ಬಹಿಷ್ಕೃತರಾದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.