Nehemiah 8:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
See verse 14
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದು ಅವರ ಎಲ್ಲಾ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿಯೂ ಡಂಗುರದಿಂದ ಸಾರಲ್ಪಡಬೇಕು ಎಂಬುದಾಗಿ ಬರೆದಿರುವ ಶಾಸನವು ಮೋಶೆಗೆ ಯೆಹೋವನಿಂದ ದೊರಕಿದ ಧರ್ಮನಿಯಮಗಳಲ್ಲಿ ಸಿಕ್ಕಿತು. ಅದರಲ್ಲಿ, “ಆ ಬಿಡಾರಗಳಿಗಾಗಿ ಜನರು ಗುಡ್ಡಕ್ಕೆ ಹೋಗಿ ಒಲೀವ್ ಮರ, ಕಾಡು ಒಲೀವ್, ಸುಗಂಧ, ಖರ್ಜೂರ ಮುಂತಾದ ಮರಗಳು ಅಲ್ಲದೆ ದಟ್ಟವಾದ ಎಲೆಗಳುಳ್ಳ ಕೊಂಬೆಗಳನ್ನು ತರಬೇಕು.”
Kannada BSI Bible 2016
ಏನಂದರೆ, ಬರೆದಿರುವ ಪ್ರಕಾರ ಗುಡಾರ ಹಾಕುವ ಹಾಗೆ ಬೆಟ್ಟಕ್ಕೆ ಹೋಗಿ ಇಪ್ಪೆಯ ಕೊಂಬೆಗಳನ್ನೂ ತೈಲಗಿಡದ ಕೊಂಬೆ ಗಳನ್ನೂ ಗಂಧದ ಗಿಡದ ಕೊಂಬೆಗಳನ್ನೂ ತಾಳೆಯ ಕೊಂಬೆಗಳನ್ನೂ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತಕ್ಕೊಂಡು ಬನ್ನಿರಿ ಎಂದು ತಮ್ಮ ಎಲ್ಲಾ ಪಟ್ಟಣಗಳ ಲ್ಲಿಯೂ ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು ಎಂಬದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ನಿಯಮದ ಪ್ರಕಾರ ಆ ಪರ್ಣಶಾಲೆಗಳಿಗಾಗಿ ಜನರು ಗುಡ್ಡಕ್ಕೆ ಹೋಗಿ ಒಲೀವ, ಕಾಡು ಒಲೀವ, ಸುಗಂಧ, ಖರ್ಜೂರ ಮುಂತಾದ ಮರಗಳ ದಟ್ಟವಾದ ಎಲೆಗಳುಳ್ಳ ಕೊಂಬೆಗಳನ್ನು ತರುವ ಹಾಗೆ ಅವರ ಎಲ್ಲಾ ಪಟ್ಟಣಗಳಲ್ಲಿಯೂ ಯೆರೂಸಲೇವಿುನಲ್ಲಿಯೂ ಡಂಗುರದಿಂದ ಪ್ರಕಟಿಸಬೇಕು ಎಂಬದಾಗಿ ಬರೆದಿರುವ ಶಾಸನವು ಮೋಶೆಗೆ ಯೆಹೋವನಿಂದ ದೊರಕಿದ ಧರ್ಮಶಾಸ್ತ್ರದಲ್ಲಿ ಸಿಕ್ಕಿತು.
Kannada Bible (KNCL) BSI 2016
ಈ ನಿಯಮದ ಪ್ರಕಾರ ಆ ಪರ್ಣಕುಟೀರ ನಿರ್ಮಾಣಕ್ಕಾಗಿ ಜನರು ಗುಡ್ಡಕ್ಕೆ ಹೋಗಿ, ಒಲೀವ, ಕಾಡು ಓಲೀವ್, ಸುಗಂಧ, ಖರ್ಜೂರ ಮುಂತಾದ ಮರಗಳ ದಟ್ಟವಾದ ಎಲೆಗಳುಳ್ಳ ಕೊಂಬೆಗಳನ್ನು ತರಬೇಕಾಗಿತ್ತು. ‘ಇದಕ್ಕಾಗಿ ಅವರ ಎಲ್ಲ ಪಟ್ಟಣಗಳಲ್ಲಿಯು ಹಾಗು ಜೆರುಸಲೇಮಿನಲ್ಲಿಯು ಡಂಗುರದಿಂದ ಪ್ರಕಟಿಸಬೇಕು’ ಎಂಬುದಾಗಿ ಬರೆದಿರುವ ಶಾಸನವೊಂದು ಮೋಶೆಗೆ ಸರ್ವೇಶ್ವರನಿಂದ ದೊರಕಿದ ಧರ್ಮಶಾಸ್ತ್ರದಲ್ಲಿ ಸಿಕ್ಕಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದರಲ್ಲಿ, “ಪರ್ಣಶಾಲೆಗಳಿಗಾಗಿ ಬೆಟ್ಟಕ್ಕೆ ಹೋಗಿ ಓಲಿವ್, ಕಾಡು ಓಲಿವ್, ಸುಗಂಧ, ಖರ್ಜೂರ ಮುಂತಾದ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತೆಗೆದುಕೊಂಡು ಬನ್ನಿರಿ ಎಂದೂ, ತಮ್ಮ ಸಕಲ ಪಟ್ಟಣಗಳಲ್ಲಿಯೂ, ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು,” ಎಂದೂ ಬರೆದಿತ್ತು.