Nehemiah 8:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜನರು ಹೋಗಿ ರೆಂಬೆಗಳನ್ನು ತಂದು ತಮಗಾಗಿ ತಾತ್ಕಾಲಿಕ ಬಿಡಾರಗಳನ್ನು ಮಾಡಿಕೊಂಡರು. ಅವರು ಈ ಬಿಡಾರಗಳನ್ನು ತಮ್ಮ ಮನೆಯ ಮೇಲ್ಛಾವಣಿಗೆಯಲ್ಲೂ ಮನೆಯ ಅಂಗಳಗಳಲ್ಲಿಯೂ, ದೇವಾಲಯದ ಅಂಗಳದಲ್ಲಿಯೂ “ಬುಗ್ಗೆ” ಮತ್ತು “ಎಫ್ರಾಯೀಮ್” ಎಂಬ ದ್ವಾರಗಳ ಸಮೀಪದಲ್ಲಿದ್ದ ಬಯಲುಗಳಲ್ಲಿಯೂ ಹಾಕಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಆಜ್ಞಾನುಸಾರವಾಗಿ ಜನರು ಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು, ತಮ್ಮ ತಮ್ಮ ಅಂಗಳ, ಮಾಳಿಗೆಗಳಲ್ಲಿಯೂ, ದೇವಾಲಯದ ಪ್ರಾಕಾರಗಳಲ್ಲಿಯೂ ನೀರು ಬಾಗಿಲು, ಎಫ್ರಾಯೀಮ್ ಬಾಗಿಲು ಇವುಗಳ ಮುಂದಣ ಬಯಲುಗಳಲ್ಲಿಯೂ ಪರ್ಣಶಾಲೆಗಳನ್ನು ಮಾಡಿಕೊಂಡರು.
Kannada BSI Bible 2016
ಹಾಗೆಯೇ ಜನರು ಹೊರಟು ಹೋಗಿ ತಕ್ಕೊಂಡು ಬಂದು ಅವರವರು ತಮ್ಮ ಮನೆ ಗಳ ಮೇಲೆಯೂ ತಮ್ಮ ಅಂಗಳಗಳಲ್ಲಿಯೂ ದೇವರ ಮನೆಯ ಅಂಗಳಗಳಲ್ಲಿಯೂ ನೀರಿನ ಬಾಗಲ ಬೀದಿಯಲ್ಲಿಯೂ ಎಫ್ರಾಯಾಮಿನ ಬಾಗಲ ಬೀದಿಯ ಲ್ಲಿಯೂ ತಮಗೆ ಗುಡಾರಗಳನ್ನು ಹಾಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಆಜ್ಞಾನುಸಾರವಾಗಿ ಜನರು ಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು ತಮ್ಮ ತಮ್ಮ ಅಂಗಳಮಾಳಿಗೆಗಳಲ್ಲಿಯೂ ದೇವಾಲಯದ ಪ್ರಾಕಾರಗಳಲ್ಲಿಯೂ ನೀರು ಬಾಗಲು, ಎಫ್ರಾಯೀಮ್ ಬಾಗಲು ಇವುಗಳ ಮುಂದಣ ಬೈಲುಗಳಲ್ಲಿಯೂ ಪರ್ಣಶಾಲೆಗಳನ್ನು ಮಾಡಿಕೊಂಡರು.
Kannada Bible (KNCL) BSI 2016
ಈ ಆಜ್ಞಾನುಸಾರ ಜನರು ಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು, ತಮ್ಮ ತಮ್ಮ ಅಂಗಳಮಾಳಿಗೆಗಳಲ್ಲಿಯೂ, ದೇವಾಲಯದ ಪ್ರಾಕಾರಗಳಲ್ಲಿಯೂ, ನೀರುಬಾಗಿಲು, ಹಾಗು ಎಫ್ರಯಿಮ್ ಬಾಗಿಲು ಇವುಗಳ ಮುಂದಣ ಬಯಲುಗಳಲ್ಲಿಯೂ ಪರ್ಣಕುಟೀರಗಳನ್ನು ಮಾಡಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಜನರು ಹೊರಟುಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು ಅವರವರು ತಮ್ಮ ಮನೆಗಳ ಮೇಲೆಯೂ, ತಮ್ಮ ಅಂಗಳಗಳಲ್ಲಿಯೂ, ದೇವರ ಮನೆಯ ಅಂಗಳಗಳಲ್ಲಿಯೂ, ನೀರು ಬಾಗಿಲ ಬೀದಿಗಳಲ್ಲಿಯೂ, ಎಫ್ರಾಯೀಮನ ಬಾಗಿಲ ಬೀದಿಗಳಲ್ಲಿಯೂ ತಮಗೆ ಪರ್ಣಶಾಲೆಗಳನ್ನು ಹಾಕಿದರು.