Nehemiah 8:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಎಜ್ರನು ಮಹೋನ್ನತ ದೇವರಾದ ಯೆಹೋವನನ್ನು ಸ್ತುತಿಸಿದನು. ಆಗ ಜನರೆಲ್ಲರೂ ಕೈಗಳನ್ನೆತ್ತಿ, “ಆಮೆನ್! ಆಮೆನ್!” ಎಂದು ಹೇಳಿದರು; ತಲೆಬಾಗಿ ಯೆಹೋವನನ್ನು ಆರಾಧಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಜ್ರನು ಪರಾತ್ಪರನಾದ ದೇವರಾದ ಯೆಹೋವನನ್ನು ಸ್ತುತಿಸಿದಾಗ, ಸರ್ವಜನರೂ ತಮ್ಮ ಕೈಗಳನ್ನೆತ್ತಿ ಆಮೆನ್, ಆಮೆನ್, ಎಂದು ಹೇಳಿ ನೆಲದವರೆಗೂ ತಲೆಬಾಗಿ ಸ್ತೋತ್ರ ಆರ್ಪಿಸಿ ಯೆಹೋವನನ್ನು ಆರಾಧಿಸಿದರು.
Kannada BSI Bible 2016
ಆಗ ಎಜ್ರನು ಮಹಾ ದೇವಾರಾಗಿರುವ ಕರ್ತನನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಪ್ರತ್ಯುತ್ತರವಾಗಿ--ಆಮೆನ್, ಆಮೆನ್ ಎಂದು ಹೇಳಿ ನೆಲದ ವರೆಗೂ ತಮ್ಮ ತಲೆಗಳನ್ನು ಬೊಗ್ಗಿಸಿ ಕರ್ತ ನನ್ನು ಆರಾಧಿಸಿದರು
Kannada BSI JV (ಕನ್ನಡ ಸತ್ಯವೇದವು J.V. (BSI))
ಎಜ್ರನು ಪರಾತ್ಪರ ದೇವರಾದ ಯೆಹೋವನನ್ನು ಸ್ತುತಿಸಿದ್ದಕ್ಕೆ ಸರ್ವಜನರೂ ತಮ್ಮ ಕೈಗಳನ್ನೆತ್ತಿ ಆಮೆನ್, ಆಮೆನ್ ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಯೆಹೋವನನ್ನು ಆರಾಧಿಸಿದರು.
Kannada Bible (KNCL) BSI 2016
ಎಜ್ರನು ಪರಾತ್ಪರ ದೇವರಾದ ಸರ್ವೇಶ್ವರನನ್ನು ಸ್ತುತಿಸಿದಾಗ ಸರ್ವಜನರೂ ತಮ್ಮ ಕೈಗಳನ್ನೆತ್ತಿ ‘ಆಮೆನ್, ಆಮೆನ್’ ಎಂದು ಹೇಳಿ ನೆಲದಮಟ್ಟಿಗೂ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಎಜ್ರನು ಮಹಾ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿದನು. ಅದಕ್ಕೆ ಜನರೆಲ್ಲರು ತಮ್ಮ ಕೈಗಳನ್ನೆತ್ತಿ ಉತ್ತರವಾಗಿ, “ಆಮೆನ್, ಆಮೆನ್,” ಎಂದು ಹೇಳಿ ನೆಲದವರೆಗೂ ತಮ್ಮ ತಲೆಗಳನ್ನು ಬಗ್ಗಿಸಿ ಯೆಹೋವ ದೇವರನ್ನು ಆರಾಧಿಸಿದರು.