Nehemiah 9:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಬುದ್ಧಿವಂತರಾಗುವಂತೆ ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ. ಮನ್ನವನ್ನು ಅವರಿಗೆ ಆಹಾರವಾಗಿ ಕೊಟ್ಟೆ. ಅವರು ಬಾಯಾರಿದಾಗ ನೀರು ಕೊಟ್ಟೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರನ್ನು ಉಪದೇಶಿಸಲು ನೀನು ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ. ಅವರ ಬಾಯಿಂದ ಮನ್ನವನ್ನು ಹಿಂದೆಗೆಯಲಿಲ್ಲ. ಬಾಯಾರಿದಾಗ ಅವರಿಗೆ ನೀರನ್ನು ಕೊಟ್ಟೆ.
Kannada BSI Bible 2016
ಇದಲ್ಲದೆ ನೀನು ಅವರಿಗೆ ಬೋಧಿ ಸುವ ಹಾಗೆ ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ; ಅವರ ಬಾಯಿಗೆ ನಿನ್ನ ಮನ್ನವನ್ನು ಹಿಂದೆಗೆಯಲಿಲ್ಲ. ಅವರ ದಾಹಕ್ಕೆ ನೀರನ್ನು ಕೊಟ್ಟಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರಿಗೆ ಉಪದೇಶಿಸಲು ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ. ಅವರ ಬಾಯಿಂದ ಮನ್ನವನ್ನು ಹಿಂದೆಗೆಯಲಿಲ್ಲ.
Kannada Bible (KNCL) BSI 2016
ಅವರಿಗಿತ್ತಿರಿ ಉಪದೇಶಿಸಲು ಸತ್ಯಾತ್ಮವನು ಅವರ ಬಾಯಿಂದ ಹಿಂದೆಗೆಯಲಿಲ್ಲ ಮನ್ನವನು ಬಾಯಾರಿದ್ದಾಗ ಕುಡಿಯಲಿತ್ತಿರಿ ಅವರಿಗೆ ನೀರನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ನೀವು ಅವರಿಗೆ ಬೋಧಿಸುವ ನಿಮ್ಮ ಒಳ್ಳೆಯ ಆತ್ಮವನ್ನು ಕೊಟ್ಟಿರಿ. ಅವರ ಬಾಯಿಂದ ನಿಮ್ಮ ಮನ್ನವನ್ನು ಹಿಂದೆಗೆಯಲಿಲ್ಲ. ಬಾಯಾರಿದ ಅವರಿಗೆ ನೀರನ್ನು ಕೊಟ್ಟಿರಿ.