Nehemiah 9:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಲವತ್ತು ವರ್ಷ ಅವರನ್ನು ಸಾಕಿದೆ. ಆ ಮರುಭೂಮಿಯಲ್ಲಿ ಅವರಿಗೆ ಬೇಕಾದದ್ದೇ ದೊರಕಿತು. ಅವರ ಬಟ್ಟೆಯು ಹರಿದುಹೋಗಲಿಲ್ಲ. ಅವರ ಪಾದಗಳು ನೋವಿನಿಂದ ಊದಿಕೊಳ್ಳಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಲ್ವತ್ತು ವರ್ಷ ಅವರನ್ನು ಅರಣ್ಯದಲ್ಲಿ ಸಾಕುತ್ತಾ ಇದ್ದೆ. ಅವರಿಗೆ ಯಾವ ಕೊರತೆಯೂ ಆಗಲಿಲ್ಲ. ಅವರ ಬಟ್ಟೆಗಳು ಹರಿದುಹೋಗಲಿಲ್ಲ, ಅವರ ಕಾಲುಗಳು ನೋವಿನಿಂದ ಊದಿಕೊಳ್ಳಲಿಲ್ಲ.
Kannada BSI Bible 2016
ಹೀಗೆಯೇ ಅರಣ್ಯದಲ್ಲಿ ನಾಲ್ವತ್ತುವರುಷ ಅವರನ್ನು ಪೋಷಿಸುತ್ತಿದ್ದಿ; ಅವರು ಕೊರತೆಪಡಲಿಲ್ಲ; ಅವರ ವಸ್ತ್ರಗಳು ಹಳೇವಾಗಲಿಲ್ಲ; ಅವರ ಕಾಲುಗಳು ಬಾತು ಹೋಗಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಯಾರಿದಾಗ ಅವರಿಗೆ ನೀರನ್ನು ಕೊಟ್ಟಿ. ನಾಲ್ವತ್ತು ವರುಷ ಅವರನ್ನು ಅರಣ್ಯದಲ್ಲಿ ಸಾಕುತ್ತಾ ಇದ್ದಿ; ಅವರಿಗೆ ಯಾವ ಕೊರತೆಯೂ ಇರಲಿಲ್ಲ. ಅವರ ಬಟ್ಟೆಗಳು ಜೀರ್ಣವಾಗಲಿಲ್ಲ, ಕಾಲುಗಳು ಬಾತುಹೋಗಲಿಲ್ಲ.
Kannada Bible (KNCL) BSI 2016
ಈ ಪರಿ ಸಲಹಿದಿರಿ ಮರುಭೂಮಿಯಲಿ ನಾಲ್ವತ್ತು ವರ್ಷ ಅಲ್ಲವರಿಗಿರಲಿಲ್ಲ ಯಾವುದೊಂದು ಸಂಕಷ್ಟ. ಊದಿಹೋಗಲಿಲ್ಲ ಕಾಲು, ಹರಿದುಹೋಗಲಿಲ್ಲ ಅವರ ವಸ್ತ್ರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆಯೇ ಮರುಭೂಮಿಯಲ್ಲಿ ನಾಲ್ವತ್ತು ವರ್ಷ ಅವರನ್ನು ಪೋಷಿಸುತ್ತಿದ್ದಿರಿ. ಅವರಿಗೆ ಯಾವ ಕೊರತೆಯೂ ಇರಲಿಲ್ಲ. ಅವರ ವಸ್ತ್ರಗಳು ಹಳೆಯದಾಗಲಿಲ್ಲ. ಅವರ ಕಾಲುಗಳು ಬಾತುಹೋಗಲಿಲ್ಲ.