Nehemiah 9:28 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಮ್ಮ ಪೂರ್ವಿಕರಿಗೆ ವಿಶ್ರಾಂತಿ ಸಿಕ್ಕಿದ ಕೂಡಲೇ ಅವರು ಮತ್ತೆ ದುಷ್ಕೃತ್ಯಗಳನ್ನು ಮಾಡಲಾರಂಭಿಸಿದರು. ಆದ್ದರಿಂದ ಆ ವೈರಿಗಳು ಅವರನ್ನು ಸೋಲಿಸಿ ಶಿಕ್ಷಿಸುವಂತೆ ನೀನು ಮಾಡಿದೆ. ಅವರು ನಿನ್ನ ಸಹಾಯಕ್ಕಾಗಿ ಮೊರೆಯಿಟ್ಟರು. ಪರಲೋಕದಲ್ಲಿ ನೀನು ಅವರ ಮೊರೆಯನ್ನು ಕೇಳಿ ಅವರಿಗೆ ಸಹಾಯಮಾಡಿದೆ. ನೀನು ದಯಾಳು! ಈ ರೀತಿ ಅನೇಕಸಲ ಆಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಉಪಶಮನವನ್ನು ಪಡೆದ ಮೇಲೆ ಅವರು ತಿರುಗಿ ದ್ರೋಹಿಗಳಾಗಿ ನಡೆಯುತ್ತಿರುವುದನ್ನು ನೀನು ಕಂಡು ಅವರ ಮೇಲೆ ದೊರೆತನ ನಡೆಸತಕ್ಕ ವೈರಿಗಳ ಕೈಗೆ ಅವರನ್ನು ಒಪ್ಪಿಸಿದೆ. ಆಗ ಅವರು ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು ಪುನಃ ಪರಲೋಕದಿಂದ ನೀನು ಕೇಳಿ ನಿನ್ನ ಕರುಣಾತಿಶಯದಿಂದ ಅವರನ್ನು ಅನೇಕಾವರ್ತಿ ರಕ್ಷಿಸಿದೆ.
Kannada BSI Bible 2016
ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿನ್ನ ಮುಂದೆ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದ ಕಾರಣ ಅವರ ಶತ್ರುಗಳು ಅವರನ್ನು ಆಳುವ ಹಾಗೆ ಅವರ ಕೈಯಲ್ಲಿ ಅವರನ್ನು ಒಪ್ಪಿಸಿದಿ; ಆದರೆ ಅವರು ತಿರಿಗಿ ನಿನ್ನನ್ನು ಕೂಗಿದಾಗ ನೀನು ಆಕಾಶದಿಂದ ಕೇಳಿ ಅವರನ್ನು ನಿನ್ನ ಕರುಣೆಯ ಪ್ರಕಾರ ಅನೇಕ ಸಾರಿ ವಿಮೋಚನೆ ಮಾಡಿದಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಉಪಶಮನವನ್ನು ಪಡೆದ ಮೇಲೆ ಅವರು ತಿರಿಗಿ ದ್ರೋಹಿಗಳಾಗಿ ನಡೆಯುತ್ತಿರುವದನ್ನು ನೀನು ಕಂಡು ಅವರ ಮೇಲೆ ದೊರೆತನ ನಡಿಸತಕ್ಕ ವೈರಿಗಳ ಕೈಗೆ ಅವರನ್ನು ಒಪ್ಪಿಸಿದಿ. ಆಗ ಅವರು ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು ಪರಲೋಕದಿಂದ ನೀನು ಕೇಳಿ ನಿನ್ನ ಕರುಣಾತಿಶಯದಿಂದ ಅವರನ್ನು ಅನೇಕಾವರ್ತಿ ರಕ್ಷಿಸಿ -
Kannada Bible (KNCL) BSI 2016
ಶಾಂತಿ ಸವಿದದ್ದೇ ದ್ರೋಹಿಗಳಾಗಿ ನಡೆದರು ಮತ್ತೆ ನೀವಿತ್ತಿರವರನು ದೊರೆತನ ನಡೆಸುವ ವೈರಿಗಳ ಕೈಗೆ. ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು, ಆಲಿಸಿದಿರಿ ಪರದಿಂದ ರಕ್ಷಿಸಿದಿರಿ ಪದೇ ಪದೇ ಅಪರಿಮಿತ ಕರುಣೆಯಿಂದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿಮ್ಮ ದೃಷ್ಟಿಯಲ್ಲಿ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದಕಾರಣ ಅವರ ಶತ್ರುಗಳು ಅವರನ್ನು ಮತ್ತೆ ಆಳುವಂತೆ ಶತ್ರು ಕೈಗೆ ಅವರನ್ನು ಒಪ್ಪಿಸಿದಿರಿ. ಆದರೆ ಅವರು ತಿರುಗಿ ನಿಮ್ಮನ್ನು ಕೂಗಿಕೊಳ್ಳಲು, ನೀವು ಪರಲೋಕದಿಂದ ಕೇಳಿ, ನಿಮ್ಮ ಅನುಕಂಪಕ್ಕೆ ಅನುಸಾರವಾಗಿ ಅವರನ್ನು ಅನೇಕ ಸಾರಿ ವಿಮೋಚಿಸಿದಿರಿ.