Nehemiah 9:36 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಗ ನಾವು ಈ ನಾಡಿನಲ್ಲಿ ಗುಲಾಮರಾಗಿದ್ದೇವೆ. ಈ ನಾಡಿನ ಫಲವನ್ನು ಮತ್ತು ಇದರಲ್ಲಿ ಬೆಳೆಯುವ ಒಳ್ಳೆಯ ಫಸಲುಗಳನ್ನು ಅನುಭವಿಸಲು ನೀನು ಈ ನಾಡನ್ನು ನಮ್ಮ ಪೂರ್ವಿಕರಿಗೆ ಕೊಟ್ಟೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನಮ್ಮ ಪೂರ್ವಿಕರಿಗೆ, ಇದರ ಉತ್ಪನ್ನವನ್ನೂ, ಸಮೃದ್ಧಿಯನ್ನೂ ಅನುಭವಿಸಿರಿ ಎಂದು ಹೇಳಿ ಕೊಟ್ಟ ದೇಶದಲ್ಲೇ ನಾವು ದಾಸರಾಗಿರಬೇಕಾಗಿ ಬಂದಿದೆ.
Kannada BSI Bible 2016
ಇಗೋ, ಈ ದಿವಸ ನಾವು ದಾಸರಾಗಿದ್ದೇವೆ; ಅದರ ಫಲವನ್ನೂ ಉತ್ತಮವಾದದ್ದನ್ನೂ ತಿನ್ನುವದಕ್ಕೆ ನೀನು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಇಗೋ, ನಾವು ದಾಸರಾಗಿದ್ದೇವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಮ್ಮ ಪಿತೃಗಳಿಗೆ - ಇದರ ಉತ್ಪನ್ನವನ್ನೂ ಸಮೃದ್ಧಿಯನ್ನೂ ಅನುಭವಿಸಿರಿ ಎಂದು ಹೇಳಿ ಕೊಟ್ಟ ದೇಶದಲ್ಲೇ ನಾವು ದಾಸರಾಗಿರಬೇಕಾಗಿದೆ. ನಮ್ಮ ಪಾಪಗಳ ನಿವಿುತ್ತವಾಗಿ ನಿನ್ನಿಂದ ನಮ್ಮ ಮೇಲೆ ನೇವಿುಸಲ್ಪಟ್ಟ ರಾಜರಿಗೆ ಈ ದೇಶದ ಹೇರಳವಾದ ಹುಟ್ಟುವಳಿಯು ಹೋಗುತ್ತದೆ.
Kannada Bible (KNCL) BSI 2016
ನಮ್ಮ ಪಿತೃಗಳಿಗೆ ನೀವೆಂದಿರಿ ‘ಸವಿಯಿರಿ ನಾಡಿನ ಫಲವನು, ಸಮೃದ್ಧಿಯನು’. ಆದರಿದೋ ಅನುಭವಿಸುತ್ತಿರುವೆವು ಈ ನಾಡಿನಲಿ ಗುಲಾಮಗಿರಿಯನು!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಈ ದಿವಸ ನಾವು ಗುಲಾಮರಾಗಿದ್ದೇವೆ. ಅದರ ಫಲವನ್ನೂ, ಅದರ ಉತ್ತಮವಾದದ್ದನ್ನೂ ತಿನ್ನುವುದಕ್ಕೆ ನೀವು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ನಾವು ಗುಲಾಮರಾಗಿದ್ದೇವೆ.