Numbers 1:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸರ್ವಸಮೂಹದವರೊಳಗಿಂದ ಆರಿಸಲ್ಪಟ್ಟಿದ್ದ ಇವರು ತಮ್ಮ ಪೂರ್ವಿಕರ ಕುಲಗಳಿಗೆ ನಾಯಕರು ಮತ್ತು ಇಸ್ರೇಲರಿಗೆ ಸಹಸ್ರಾಧಿಪತಿಗಳಾಗಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಕುಲಗಳಲ್ಲಿ ಪ್ರಧಾನಪುರುಷರು ಹಾಗೂ ಇಸ್ರಾಯೇಲಿನ ಕುಲಗಳ ಪ್ರಮುಖರು.
Kannada BSI Bible 2016
ಸಭೆಯವರಲ್ಲಿ ಪ್ರಸಿದ್ಧವಾದವರೂ ತಮ್ಮ ತಂದೆಗಳ ಗೋತ್ರಗಳ ಪ್ರಭುಗಳೂ ಇಸ್ರಾಯೇಲಿನಲ್ಲಿ ಸಹಸ್ರಗಳ ಮುಖ್ಯ ಸ್ಥರೂ ಇವರೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ಸರ್ವಸಮೂಹದವರೊಳಗಿಂದ ಕರಸಿಕೊಂಡವರು, ತಮ್ಮ ತಮ್ಮ ಕುಲಗಳಲ್ಲಿ ಪ್ರಧಾನಪುರುಷರು, ಇಸ್ರಾಯೇಲ್ಯರಲ್ಲಿ ಸಹಸ್ರಾಧಿಪತಿಗಳು.
Kannada Bible (KNCL) BSI 2016
ಇವರು ಸಮಾಜದಲ್ಲಿ ಹೆಸರು ಪಡೆದವರು. ತಮ್ಮ ತಮ್ಮ ಕುಲಗಳಲ್ಲಿ ಪ್ರಧಾನ ಪುರುಷರು, ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಪುರಾತನ ಗೋತ್ರಗಳ ನಾಯಕರು. ಇವರು ಇಸ್ರಾಯೇಲಿನ ಗೋತ್ರಗಳ ಪ್ರಮುಖರು.