Numbers 10:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಎರಡನೆಯ ಸಲ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸುವಾಗ ದೇವದರ್ಶನಗುಡಾರದ ದಕ್ಷಿಣ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎರಡನೆಯ ಸಾರಿ ಆರ್ಭಟವಾಗಿ ಊದಿಸುವಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿಯೇ ಊದಿಸಬೇಕು.
Kannada BSI Bible 2016
ನೀವು ಎರಡನೇ ಸಾರಿ ಎಚ್ಚರಿಸುವಂತೆ ಊದುವಾಗ ದಕ್ಷಿಣದಲ್ಲಿ ಇರು ವಂತ ಪಾಳೆಯಗಳು ಪ್ರಯಾಣಮಾಡಬೇಕು; ಅವರ ಪ್ರಯಾಣಕ್ಕೆ ಎಚ್ಚರಿಸುವಂತೆ ಊದಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎರಡನೆಯ ಸಾರಿ ಆರ್ಭಟವಾಗಿ ಊದಿಸುವಾಗ ತೆಂಕಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣಹೊರಡಬೇಕಾದಾಗ ಆರ್ಭಟವಾಗಿಯೇ ಊದಿಸಬೇಕು.
Kannada Bible (KNCL) BSI 2016
ಎರಡನೆಯ ಸಾರಿ ಆರ್ಭಟವಾಗಿ ಮೊಳಗಿಸಿದಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣ ಹೊರಡಬೇಕಾದಾಗ ಆರ್ಭಟವಾಗಿಯೇ ಮೊಳಗಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಎರಡನೆಯ ಸಾರಿ ಆರ್ಭಟವಾಗಿ ಊದುವಾಗ, ದಕ್ಷಿಣದಲ್ಲಿ ಇಳಿದುಕೊಳ್ಳುವ ಪಾಳೆಯಗಳು ಪ್ರಯಾಣ ಮಾಡಬೇಕು. ಅವರ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿ ಊದಬೇಕು.