Numbers 11:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇವರು ನನ್ನ ಬಳಿಗೆ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳಿಕೊಳ್ಳುತ್ತಾರಲ್ಲಾ! ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು ನನ್ನ ಬಳಿಗೆ ಅಳುತ್ತಾ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳುತ್ತಾರಲ್ಲಾ, ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು?
Kannada BSI Bible 2016
ಈ ಸಮಸ್ತ ಜನರಿಗೆ ಕೊಡಲು ಮಾಂಸವು ನನಗೆ ಎಲ್ಲಿಂದ ದೊರಕುವದು? ಯಾಕಂದರೆ--ತಿನ್ನುವ ಹಾಗೆ ನಮಗೆ ಮಾಂಸವನ್ನು ಕೊಡು ಎಂದು ನನ್ನ ಬಳಿಯಲ್ಲಿ ಅಳುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವರು ನನ್ನ ಬಳಿಗೆ ಅಳುತ್ತಾ ಬಂದು - ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು ಎಂದು ಕೇಳಿಕೊಳ್ಳುತ್ತಾರಲ್ಲಾ; ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು.
Kannada Bible (KNCL) BSI 2016
ಇವರು ನಿಷ್ಠೂರವಾಗಿ ಮಾತಾಡುತ್ತಾ ನನ್ನ ಬಳಿಗೆ ಬಂದು, ‘ತಿನ್ನಲಿಕ್ಕೆ ನಮಗೆ ಮಾಂಸವನ್ನು ಕೊಡು’ ಎಂದು ಕೇಳುತ್ತಿದ್ದಾರಲ್ಲಾ, ಇಷ್ಟು ಜನಕ್ಕೆ ಬೇಕಾದ ಮಾಂಸ ನನಗೆಲ್ಲಿ ದೊರಕೀತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಸಮಸ್ತ ಜನರಿಗೆ ಕೊಡುವುದಕ್ಕೆ ಮಾಂಸವು ನನಗೆ ಎಲ್ಲಿಂದ ದೊರಕುವುದು? ‘ನಮಗೆ ತಿನ್ನಲು ಮಾಂಸವನ್ನು ಕೊಡು,’ ಎಂದು ನನ್ನ ಬಳಿಗೆ ಬಂದು ಅಳುತ್ತಿದ್ದಾರೆ.