Numbers 11:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದಕ್ಕೆ ಮೋಶೆ, “ಯೆಹೋವನೇ, ಇಲ್ಲಿ ಆರು ಲಕ್ಷ ಗಂಡಸರು ನನ್ನೊಂದಿಗೆ ಇದ್ದಾರೆ. ಆದಾಗ್ಯೂ ನೀನು ಇವರಿಗೆ ಮಾಂಸ ಕೊಡುವುದಾಗಿಯೂ ಇವರು ಒಂದು ತಿಂಗಳೆಲ್ಲಾ ಅದನ್ನು ತಿನ್ನುವುದಾಗಿಯೂ ನೀನು ಹೇಳುತ್ತಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಮೋಶೆ, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು, ಆದರೂ ನೀನು, ‘ಇವರಿಗೆ ಒಂದು ತಿಂಗಳು ಪೂರ್ತಿಯಾಗಿ ಮಾಂಸವನ್ನು ತಿನ್ನಲು ಕೊಡುತ್ತೇನೆ’ ಎಂದು ಹೇಳಿದ್ದೀ.
Kannada BSI Bible 2016
ಅದಕ್ಕೆ ಮೋಶೆಯು ಹೇಳಿದ್ದೇನಂದರೆ--ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಪೂರ್ತಿ ಒಂದು ತಿಂಗಳು ತಿನ್ನುವ ಹಾಗೆ ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀನು ಹೇಳಿದ್ದೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಮೋಶೆ - ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು; ಆದಾಗ್ಯೂ ನೀನು - ಇವರು ಪೂರಾ ಒಂದು ತಿಂಗಳು ತಿನ್ನುವಷ್ಟು ಮಾಂಸವನ್ನು ಕೊಡುತ್ತೇನೆ ಎಂದು ಹೇಳಿದ್ದೀ.
Kannada Bible (KNCL) BSI 2016
ಮೋಶೆ ಸರ್ವೇಶ್ವರನಿಗೆ, ” ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಆದರೂ ನೀವು, ‘ಇವರು ಇಡೀ ಒಂದು ತಿಂಗಳು ತಿನ್ನುವಷ್ಟು ಮಾಂಸವನ್ನು ಕೊಡುತ್ತೇನೆ’ ಎಂದು ಹೇಳಿದ್ದೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಮೋಶೆಯು, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಅವರು ಒಂದು ತಿಂಗಳು ಪೂರ್ತಿ ತಿನ್ನುವ ಹಾಗೆ, ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀವು ಹೇಳಿದ್ದೀರಿ.