Numbers 12:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದಕಾರಣ ಅವರು ಮಿರ್ಯಾಮಳನ್ನು ಏಳು ದಿವಸಗಳವರೆಗೆ ಪಾಳೆಯದ ಹೊರಗೆ ಇಟ್ಟರು. ಆಕೆ ತಿರುಗಿ ಸೇರಿಕೊಳ್ಳುವ ತನಕ ಇಸ್ರೇಲರು ಪ್ರಯಾಣ ಮಾಡಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹಾಗೆಯೇ ಮಿರ್ಯಾಮಳು ಏಳು ದಿನಗಳವರೆಗೆ ಪಾಳೆಯದ ಹೊರಗೆ ಇರಬೇಕಾಯಿತು. ಆಕೆಯನ್ನು ತಿರುಗಿ ಸೇರಿಸಿಕೊಳ್ಳುವ ವರೆಗೆ ಇಸ್ರಾಯೇಲರು ಪ್ರಯಾಣಮಾಡಲಿಲ್ಲ.
Kannada BSI Bible 2016
ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿಯಿಟ್ಟರು. ಮಿರ್ಯಾಮಳು ತಿರಿಗಿ ಒಳಗೆ ಬರುವ ವರೆಗೆ ಜನರು ಪ್ರಯಾಣ ಮಾಡಲಿಲ್ಲ.ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್‌ ಅರಣ್ಯದಲ್ಲಿ ಇಳುಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದಕಾರಣ ವಿುರ್ಯಾಮಳು ಏಳು ದಿನದವರೆಗೆ ಪಾಳೆಯದ ಹೊರಗೆ ಇರಬೇಕಾಯಿತು. ಆಕೆಯು ತಿರಿಗಿ ಸೇರಿಕೊಳ್ಳುವ ಪರ್ಯಂತರ ಇಸ್ರಾಯೇಲ್ಯರು ಪ್ರಯಾಣಮಾಡಲಿಲ್ಲ.
Kannada Bible (KNCL) BSI 2016
ಹೀಗೆ ಮಿರ್ಯಾಮಳು ಏಳು ದಿವಸ ಪಾಳೆಯದ ಹೊರಗೆ ಇರಬೇಕಾಯಿತು. ಅವಳನ್ನು ಮರಳಿ ಸೇರಿಸಿಕೊಳ್ಳುವವರೆಗೆ ಇಸ್ರಯೇಲರು ಪ್ರಯಾಣ ಮಾಡಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿ ಇಟ್ಟರು. ಮಿರ್ಯಾಮಳು ತಿರುಗಿ ಒಳಗೆ ಬರುವವರೆಗೆ ಜನರು ಪ್ರಯಾಣ ಮಾಡಲಿಲ್ಲ.